ಆಕಸ್ಮಿಕವಾಗಿ ಆಳದ ತೆರೆದ ಭಾವಿಯಲ್ಲಿ ಆಕಳೊಂದು ಬಿದ್ದ ಘಟನೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಬಸವರಾಜ್ ಭೈರಪ್ಪ ಜಾಂಬಗೊಂಡ ಎಂಬುವರಿಗೆ ಸೇರಿದ ಆಕಳೊಂದು ಕಾಲು ಜಾರಿ ನಿನ್ನೆ ಸಾಯಂಕಾಲ ಸುಮಾರು 20 ಅಡಿ ಆಳದ ತೆರೆದ ಭಾವಿಯಲ್ಲಿ ಬಿದ್ದಿದೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಯ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಸುಮಾರು 30 ನಿಮಿಷಗಳ ಕಾಲ ಹರಸಾಹಸ ನಡೆಸಿ ಆಕಳ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾದರು.
ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿದ್ದಾರೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎ.ಡಿ ಮುಲ್ಲಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಪ್ಪಾಸಾಹೇಬ ಹೊಣಕಾಂಡೆ, ಸಹದೇವ ಶಿಂಧೆ , ರವೀಂದ್ರ ಸಂಗಮ, ಶಿವಯ್ಯ ಮಠಪತಿ, ಸಿದ್ದಪ್ಪ ಹಗಲಂಬಿ, ಸಂತೋಷ್ ಧರ್ಮಟ್ಟಿ ಇನ್ನುಳಿದವರು ಪಾಲ್ಗೊಂಡಿದ್ದರು.