ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರಿನ ವತಿಯಿಂದ ನಡೆಸಲಾಗುವ ಗಣಕಯಂತ್ರ ಪರೀಕ್ಷೆಗಳು ದಿನಾಂಕ 04.08.2024 ರಿಂದ ದಿನಾಂಕ 12.08.2024 ವರೆಗೆ ನಡೆಯಲಿವೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರಿನ ವತಿಯಿಂದ 2024ನೇ ಸಾಲಿನ ಅಗಸ್ಟ್ ತಿಂಗಳ ಗಣಕಯಂತ್ರ ಪರೀಕ್ಷೆಗಳು ದಿನಾಂಕ 04.08.2024 ರಿಂದ ದಿನಾಂಕ 12.08.2024 ವರೆಗೆ ನಡೆಯಲಿವೆ. ಶಿವನಗರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಸಂಬಂಧಪಟ್ಟ ಪ್ರವೇಶ ಪತ್ರವನ್ನು ಪಡೆದುಕೊಂಡು ನಿಗದಿತವಾದ ದಿನಾಂಕ ಮತ್ತು ಸಮಯ ಗಮನಿಸಿ, ಕೊಟ್ಟ ಸಮಯಕ್ಕಿಂತ ಅರ್ಧ ತಾಸು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕೆಂದು ಖಡೇ ಬಜಾರ ,ಬೆಳಗಾವಿಯಲ್ಲಿರುವ “ಸುನಿತಾ ಬೆರಳಚ್ಚು ಮತ್ತು ಕಂಪ್ಯೂಟರ್ ” ವಾಣಿಜ್ಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.