Belagavi

ಕೇಂದ್ರಕ್ಕೆ ಸವಾಲಾದ ಸಿದ್ಧರಾಮಯ್ಯನವರ ಮೇಲೆ ಬಿಜೆಪಿ ಸೇಡಿನ ರಾಜಕಾರಣ; ಸಚಿವ ದಿನೇಶ್ ಗುಂಡುರಾವ್

Share

ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಧ್ವನಿ ಎತ್ತಿದ್ದರಿಂದ ಸಿಎಂ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಬೆಳಗಾವಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ಧರಾಮಯ್ಯ ಸೆಡಿದೆದ್ದಿದ್ದರಿಂದ ಅವರ ವಿರುದ್ಧ ಎಲ್ಲ ರೀತಿಯ ಷಡ್ಯಂತ್ರಗಳನ್ನು ಮಾಡಿ ಬಿಜೆಪಿ ಸರ್ಕಾರ ಸರ್ಕಾರ ಸಿಎಂ ಸಿದ್ಧರಾಮಯ್ಯನವರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದ ಅವರು ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳಲ್ಲಿ ಇಡಿ ದುರುಪಯೋಗ ಮಾಡಿಕೊಂಡು ವಿಪಕ್ಷಿಯರ ಮೇಲೆ ದಾಳಿ ನಡೆಸಿ, ಸರ್ಕಾರವನ್ನು ಅಸ್ಥಿರ ಮಾಡುವ ಹುನ್ನಾರ ಬಿಜೆಪಿ ನಡೆಸಿದೆ ಎಂದು ಆರೋಪಿಸಿದರು.

ಇನ್ನು ಮುಡಾದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ನ್ಯಾಯಯುತವಾಗಿ ಸೈಟಗಳನ್ನು ಪಡೆದುಕೊಂಡಿದ್ದಾರೆ. ಆದರೂ ಅವರ ಮೇಲೆ ಗೂಬೆ ಕೂರಿಸುವ ಕೆಲಸವಾಗ್ತಾಯಿದೆ. ಬಿಜೆಪಿ ಶಾಸಕರು ಸಚಿವರುಗಳು ಇದ್ದಾಗ ಸೈಟಗಳನ್ನು ನೀಡಲಾಗಿದೆ. ಆವಾಗ ಸಿದ್ಧರಾಮಯ್ಯ ಅಧಿಕಾರದಲ್ಲೇ ಇರಲಿಲ್ಲವೆಂದರೇ ಅಧಿಕಾರದ ದುರುಪಯೋಗ ಮಾಡಿಕೊಳ್ಳಲು ಹೇಗೆ ಸಾಧ್ಯ? ನಾವು ಮೇಕೆದಾಟು, ನಮ್ಮ ನಡೆ ಕೃಷ್ಣೆ ಕಡೆ, ಭಾರತ ಜೋಡೋದಂತಹ ನ್ಯಾಯಕ್ಕಾಗಿ ಅರ್ಥಪೂರ್ಣವಾದ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ಬಿಜೆಪಿಯ ಈ ಪಾದಯಾತ್ರೆಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಯಾವ ರೀತಿ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆಂದು ಅವರ ಶಾಸಕರೇ ಹೇಳಿಕೊಂಡಿದ್ದಾರೆ. ಪ್ರತಿಯೊಂದು ಕಡತಗಳನ್ನು ಕೂಡ ವಿಜಯೇಂದ್ರ ಪರಿಶೀಲಿಸುತ್ತಿದ್ದರೆಂಬ ಸಂಗತಿ ಎಲ್ಲರಿಗೂ ಗೊತ್ತು. ಅವರಿಗೆ ಸಿದ್ಧರಾಮಯ್ಯನವರ ಮೇಲೆ ಅಧಿಕಾರದ ದುರುಪಯೋಗದ ಆರೋಪ ಮಾಡುವ ಹಕ್ಕಿಲ್ಲವೆಂದರು.

ರಾಜ್ಯಪಾಲರಿಗೆ ತನಿಖೆಗೆ ಆದೇಶಿಸುವ ಮತ್ತು ನೋಟಿಸ್ ನೀಡುವ ಅಧಿಕಾರವಿದೆ. ಆದ್ರೇ ಒಂದೇ ದಿನಕ್ಕೆ ನೋಟಿಸ್ ನೀಡಿದ್ದಾರೆಂದರೇ ಇದರ ಹಿಂದೇ ಷಡ್ಯಂತ್ರವಿದೆ. ವಿಪಕ್ಷಗಳನ್ನು ಮುಗಿಸುವ ಹುನ್ನಾರ ಇದರಲ್ಲಿ ಅಡಗಿದೆ. ಸಿದ್ಧರಾಮಯ್ಯ ಅವರು ಶೋಷಿತ ವರ್ಗದ ಧ್ವನಿ. ಬಿಜೆಪಿಗೆ ಸವಾಲಾಗಿರುವ ವ್ಯಕ್ತಿ. ಆದ್ದರಿಂದ ರಾಜ್ಯಪಾಲರ ಮುಖೇನ ಅವರನ್ನು ರಾಜಕೀಯವಾಗಿ ಬಿಜೆಪಿ ಮುಗಿಸಲು ಹೊರಟಿದೆ. ಸುಮಾರು ಶೇ 95%ರಷ್ಟು ವಿಪಕ್ಷಿಯರ ಮೇಲೆ ದಾಳಿಗಳಾಗಿವೆ ಬಿಜೆಪಿಗರಿಗೆ ಅವರು ಮಾಡಿದ್ದೇ ಕಾನೂನು ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯನವರು ತಪ್ಪೇ ಮಾಡಿಲ್ಲವೆಂದರೇ ನಾವು ಭಯಪಡುವ ಅವಶ್ಯಕತೆಯೇ ಇಲ್ಲ. ನಾವು ಒಗ್ಗಟ್ಟಾಗಿದ್ದೀವಿ. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಜೆಡಿಎಸ್ ನವರಿಗೂ ಇದರಲ್ಲಿ ಸಿದ್ಧರಾಮಯ್ಯನವರ ತಪ್ಪಿಲ್ಲ ಎಂದು ಗೊತ್ತು. ಆದರೇ ಕುಮಾರಸ್ವಾಮಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಮಂಡ್ಯ, ರಾಮನಗರದಲ್ಲಿ ಎಲ್ಲಿ ಜೆಡಿಎಸ್ ಪ್ರಾಬಲ್ಯವಿದೆಯೋ ಅಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೊರಟಿದೆ. ಕುಮಾರಸ್ವಾಮಿಗಳಿಗೆ ಸಚಿವ ಸ್ಥಾನ ನೀಡಿ, ಜೆಡಿಎಸ್ ಮುಗಿಸುವುದೇ ಅವರ ಬಿಜೆಪಿಯ ಮುಖ್ಯ ಉದ್ಧೇಶ ಎಂದರು.

ಡೆಂಗ್ಯು ನಿಯಂತ್ರಣಕ್ಕೆ ಸರ್ಕಾರ ಕ್ರಮಕೈಗೊಂಡಿದೆ.ಬೆಳಗಾವಿ ಜಿಲ್ಲೆಯಲ್ಲಿ ಖಾನಾಪೂರದಲ್ಲಿ ಹೊಸ ತಾಲೂಕಾ ಆಸ್ಪತ್ರೆ ಮಂಜೂರಾಗಿದೆ. ಕಿತ್ತೂರಿಗೆ ಹೊಸ ಆಸ್ಪತ್ರೆ ನೀಡಲಾಗುತ್ತಿದೆ. ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ನೀಡಿದ್ದೇವೆ. 5 ನಮ್ಮ ಕ್ಲಿನಿಕಗಳನ್ನು ನೀಡುತ್ತೇವೆ. ಸಿಬ್ಬಂದಿಗಳ ಕೊರತೆಯನ್ನು ನೀಗಿಸುತ್ತೇವೆ. ವೇತನವನ್ನು ಕೂಡ ಹೆಚ್ಚಿಸುವ ಯೋಚನೆಯಿದೆ ಎಂದರು. 16 ಆಸ್ಪತ್ರೆಗಳಿಗೆ ಹೊಸ ಪರಿಕರಗಳನ್ನು ನೀಡಲಾಗುತ್ತಿದೆ ಎಂದರು. (ಬೈಟ್)

ವಿಶ್ವ ಅಂಗಾಂಗ ದಾನಿಗಳ ದಿನಾಚರಣೆಯ ನಿಮಿತ್ಯ ಜಾಗೃತಿ ಮೂಡಿಸಲು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರ ತಿರ್ಮಾನಿಸಿದೆ. ಕರ್ನಾಟಕ ಅಂಗಾಂಗ ದಾನದಲ್ಲಿ 2ನೇ ಸ್ಥಾನದಲ್ಲಿದೆ. ದಾನಿಗಳ ಕುಟುಂಬಗಳಿಗೆ ಸತ್ಕಾರ ನೀಡಲಾಗುವುದು. ಸಿಎಂ ಮತ್ತು ಆರೋಗ್ಯ ಸಚಿವರಿಂದ ಪ್ರೋತ್ಸಾಹ ಪ್ರಮಾಣಪತ್ರ ನೀಡಲಾಗುವುದು. ಅಂಗಾಂಗ ದಾನಿಗಳ ಕುಟುಂಬದವರನ್ನು ಕರೆಯಿಸಿ ಸ್ವಾತಂತ್ರ್ಯೋತ್ಸವದ ದಿನ ಮತ್ತು ಗಣರಾಜ್ಯೋತ್ಸವದ ದಿನ ಸತ್ಕಾರ ಮಾಡುವ ನಿರ್ಧಾರವಿದೆ ಎಂದರು .

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!