Belagavi

ಒಂದು ಜೀವವನ್ನು ಉಳಿಸಿದರೇ ಒಂದು ಕುಟುಂಬವನ್ನು ಉಳಿಸಿದಂತೆ; ಆರೋಗ್ಯ ಸಚಿವ ದಿನೇಶ್ ಗುಂಡುರಾವ್

Share

ಅಂಗಾಂಗ ದಾನದ ಮೂಲಕ ಮರಣಾ ನಂತರ ಬೇರೆಯವರ ಜೀವನ್ನು ಉಳಿಸಬಹುದಾಗಿದೆ. ಒಬ್ಬ ದಾನಿಯಿಂದ 8 ಜನರ ಜೀವವನ್ನು ಉಳಿಸಬಹುದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು. ಬೆಳಗಾವಿಯಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೆಳಗಾವಿಯ ಇವರ ಸಂಯುಕ್ತಾಶ್ರಯದಲ್ಲಿ ಭಾರತೀಯ ಅಂಗಾಂಗ ದಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್ ಅವರು ಮರಣದಂಚಿನಲ್ಲಿರುವವರ ಅಂಗಾಂಗ ದಾನದ ಕುರಿತು ತಿರ್ಮಾಣ ತೆಗೆದುಕೊಳ್ಳಲು ಅವರಿಗೆ ಪ್ರೇರಣೆ ಮುಖ್ಯ.ದಾನಿಗಳ ಕುಟುಂಬಗಳನ್ನು ಗೌರವಿಸುವ ಕೆಲಸವಾಗಬೇಕೆಂಬುದು ಸರ್ಕಾರದ ಉದ್ಧೇಶವಾಗಿದೆ. ಅಂಗಾಗ ದಾನಕ್ಕೆ ಪ್ರೋತ್ಸಾಹಿಸಲು ಪ್ರತಿಜ್ಞೆಯನ್ನು ಕೈಗೊಳ್ಳಲಾಗುತ್ತಿದೆ. ಬದುಕು ಮತ್ತು ಜೀವ ಬಹಳ ಪ್ರಮುಖ. ಒಂದು ಜೀವವನ್ನು ಉಳಿಸಿದರೇ ಒಂದು ಕುಟುಂಬವನ್ನು ಉಳಿಸಿದಂತೆ. ಒಬ್ಬ ದಾನಿಯಿಂದ 8 ಜನರ ಜೀವ ಉಳಿಸಬಹುದು ಎಂದರು.

ಇನ್ನು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಮನುಷ್ಯ ಇಂದಿನ ಆಧುನಿಕ ಜೀವನದಲ್ಲಿ ಎಷ್ಟೋ ಮುಂದುವರೆದರೂ ಅಂಗಾಂಗಗಳನ್ನು ತಯಾರಿಸಲಾರ. ಅಂಗಾಂಗಗಳ ಮಹತ್ವವನ್ನು ಅರೆತು, ಅಂಗಾಂಗ ದಾನಕ್ಕೆ ಮುಂದಾಗಬೇಕು. ಹುಟ್ಟುಹಬ್ಬಗಳ ಸಂದರ್ಭದಲ್ಲಿ ರಕ್ತದಾನ ಶಿಬಿರ – ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಬದಲೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.

ವೇದಿಕೆಯ ಮೇಲೆ ಫಾದರ್ ಪ್ರಮೋದ ಕುಮಾರ್, ಕಿತ್ತೂರು ಶಾಸಕರಾದ ಶಾಸಕ ಬಾಬಾಸಾಹೇಬ್ ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ.ರಣದೀಪ ಆಯುಕ್ತರು, ನಿರ್ದೇಶಕರಾದ ಡಾ.ಜಿಎನ್ ಶ್ರೀನಿವಾಸ್, ಸಹನಿರ್ದೇಶಕರಾದ ರಜನಿ ಎಂ, ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಅಭಿಯಾನ ನಿರ್ದೇಶಕರ ನವೀನ್ ಭಟ್, ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕರಾದ ರಾಹುಲ ಶಿಂಧೆ,ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಮಹೇಶ್ ಕೋಣಿ, ಕಾಹೇರನ ಉಪಕುಲಪತಿಗಳಾದ ನಿತಿನ್ ಗಂಗಾಣೆ, ಬೆಕೆಎಲ್ಇ ವೈಸ್ ಚಾನ್ಸಲರ್ , ವೆಂಕಟೇಶ್ ಮೋಗೆರ, ವಿ ಎಸ್ ಸಾಧುನವರ, ಎಸ್ ವಿ ಮುನ್ಯಾಳ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!