ಜಪಾನ್ ಶೋಟೋಕಾನ್ ಕರಾಟೆ ರಾಷ್ಟ್ರೀಯ ಕರಾಟೆ ಸ್ಪರ್ಧೆಯು ಇತ್ತೀಚೆಗೆ ನಡೆದಿದ್ದು, ಈ ಸ್ಪರ್ಧೆಯಲ್ಲಿ ಒಟ್ಟು ಇನ್ನೂರು ನೂರು ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಬೆಳಗಾವಿಯ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ.
14 ವರ್ಷ ವಯೋಮಿತಿಯಲ್ಲಿ ರಿಯಾ ವೆರ್ಣೇಕರ್ ಚಿನ್ನದ ಪದಕ ಗೆದ್ದರೆ, ಹದಿಮೂರು ವರ್ಷ ವಯೋಮಿತಿಯಲ್ಲಿ ಸೋಹಮ್ ಮಂಜ್ರೇಕರ್, ತೇಜಸ್ ದೇಶಮುಖ್, ಗುರುವೀರ್ ಕುರಣವಾಡಿ ಚಿನ್ನದ ಪದಕ ಗೆದ್ದಿದ್ದಾರೆ. ಬಾಲಕಿಯರ ಪೈಕಿ ಮೃಣಾಲ್ ಕುಡ್ಚಿಕರ್ ವಿಘ್ನೇಶ ಬಾಬಾಚೆ, ಅರ್ಶೀತ್ ಅರಳಿಕಟ್ಟಿ, ಶೌರ್ಯ ಪೂಜಾರಿ, ಆರ್ಯ ದಡ್ಡಿಕರ ಬೆಳ್ಳಿ ಪದಕ ಪಡೆದರು. ಈ ಸಂದರ್ಭದಲ್ಲಿ ಹಿರಿಯ ಮಾಸ್ತರ್ ಮಧು ಪಾಟೀಲ್ ಹಾಗೂ ಆಕಾಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಈ ಎಲ್ಲಾ ಕರಾಟೆ ಪಟುಗಳು ಮಧು ಪಾಟೀಲ್, ಪ್ರಸಾದ್ ಪಾಟೀಲ್, ಆಕಾಶ ಪಾಟೀಲ್ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.