ಶಾಲೆಯ ಗೇಟ್ ಮುಂದಿನ ಬೃಹದಾಕಾರದ ಮರವೊಂದು ಚಲಿಸುತ್ತಿದ್ದ ಗೂಡ್ಸ್ ರಿಕ್ಷಾ ಮೇಲೆ ಉರುಳಿ ಬಿದ್ದಿರುವ ಘಟನೆಬೆಳಗಾವಿ ನಗರದ ಸಿ.ಪಿ.ಎಡ್ ಮೈದಾನ ಬಳಿ ನಡೆದಿದ್ದು, ಸ್ವಲ್ವದರಲ್ಲೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬೆಳಗಾವಿ ನಗರದಲ್ಲಿ ಶುಕ್ರವಾರ ಸಾಯಂಕಾಲ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಬೆಳಗಾವಿಯ ಸಿ.ಪಿ.ಎಡ್ ಮೈದಾನ ಹತ್ತಿರದ ವನಿತಾ ವಿದ್ಯಾಲಯ ಶಾಲೆಯ ಗೇಟ್ ಮುಂದಿನ ಬೃಹದಾಕಾರದ ಮರವೊಂದು ಚಲಿಸುತ್ತಿದ್ದ ಗೂಡ್ಸ್ ರಿಕ್ಷಾ ಮೇಲೆ ಬಿದ್ದಿದೆ.
ಬೈಲಹೊಂಗಲನಿಂದ ಬೆಳಗಾವಿಗೆ ಮನೆಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬೆಳಗಾವಿಯ ಸಿ.ಪಿ.ಎಡ್ ಮೈದಾನ ಹತ್ತಿರದ ವನಿತಾ ವಿದ್ಯಾಲಯ ಶಾಲೆಯ ಗೇಟ್ ಮುಂದಿನ ಬೃಹದಾಕಾರದ ಮರ ಏಕಾಏಕಿ ಕುಸಿದು ಬಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಆದರೇ ರಿಕ್ಷಾ ನಜ್ಜುಗುಜ್ಜಾಗಿದೆ. ಈ ಅವಘಡದಿಂದ ಶಾಲಾ ಮಕ್ಕಳು ಪಾರಾಗಿದ್ದಾರೆ. ಇಂತಹ ಮರಗಳನ್ನು ಅನಾಹುತಗಳು ನಡೆಯುವ ಮುನ್ನವೇ ಸಂಬಂಧಿಸಿದವರು ತೆರವುಗೊಳಿಸಬೇಕೆಂದು ರಿಕ್ಷಾ ಚಾಲಕ ತಮಜೀದ್ ತಾಳಿಕೋಟೆ ಆಗ್ರಹಿಸಿದ್ದಾರೆ. ಮರ ತೆರವುಗೊಳಿಸುವ ವರೆಗೂ ಸಿ.ಪಿ.ಎಡ್. ಮೈದಾನದ ರಸ್ತೆಯ ಮೇಲೆ ಸಂಚಾರ ದಟ್ಟನೆ ನಿರ್ಮಾಣವಾಗಿತ್ತು.