ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಓರ್ವ ವ್ಯಕ್ತಿ ಸಾವನ್ನಪ್ಪಿದ ದುರ್ಘಟನೆ ಖಾನಾಪೂರ ತಾಲೂಕಿನ ನಾಗರಗಾಳಿಯಲ್ಲಿ ನಡೆದಿದೆ.
ನಾಗರಗಾಳಿ ಬಳಿ ಕಾರುಗಳ ಮುಖಾಮುಖಿ ಅಪಘಾತ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಮನಗರ, ಧಾರವಾಡ ರಾಜ್ಯ ಹೆದ್ದಾರಿಯ ಖಾನಾಪೂರ ತಾಲೂಕಿನ ನಾಗರಗಾಳಿ ಬಳಿ ಅಳ್ನಾವರ ದಿಂದ ಗೋವಾ ಕಡೆಗೆ ಹೊರಟಿರುವ ಸ್ವಿಫ್ಟ್ ಕಾರು ಹಾಗೂ ರಾಮನಗರದಿಂದ-ಅಳ್ಳಾವರ ಕಡೆಗೆ ಎಕ್ಸ್ ಯು ವಿ 500 ಕಾರು. ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಸ್ವಿಫ್ಟ್ ಅಳ್ಳಾವರ ಕಡೆಯಿಂದ ಗೋವಾಕ್ಕೆ ಹೊರಟಿರುವ ಚಾಲಕನಿಗೆ ತೀವ್ರ ಗಾಯಗೊಂಡಿದ್ದರಿಂದ ಸಮೀಪದ ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಮೃತ ಪಟ್ಟ ವ್ಯಕ್ತಿಯನ್ನು ಅಮೀರ್ ಬೆಟಗೇರಿ (28). ಎಂದು ತಿಳಿದು ಬಂದಿದೆ ಧಾರವಾಡ ಜಿಲ್ಲೆಯ ಕೋಟುರ ಗ್ರಾಮಕ್ಕೆ ಬಂದು ಭೇಟಿ ನೀಡಿ ಗೋವಾಕ್ಕೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಕಾರ್ ನಲ್ಲಿ ಚಾಲಕ ಒಬ್ಬನೇ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಖಾನಾಪೂರ ಪೋಲಿಸ್ ಠಾಣೆಯ ಸಿಪಿಐ ಮಂಜುನಾಥ ನಾಯಕ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ