savdatti

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಮನಕ್ಕೆ ತಂದು ಬಸ್ ಸಮಸ್ಯೆ ನಿಗಿಸಿದ ಗ್ರಾಂ ಪಂ ಸದಸ್ಯ

Share

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳೆಯರಿಗೆ ಅನುಕೂಲ ವಿದ್ಯಾರ್ಥಿಗಳಿಗೆ ಅನಾನೂಕೂಲ ವಾಗಿದ್ದು ಮಾತ್ರ ಸುಳ್ಳಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಶಾಲಾಕಾಲೇಜುಗಳಿಗೆ ವಿದ್ಯಾಬ್ಯಾಸಕ್ಕೆ ತೆರಳು ಸಮಸ್ಯೆ ಆಗುತ್ತಿದ್ದನ್ನ ಗಮನಿಸಿ ಸಾರಿಗೆ ಸಚಿವರು ಬಳಿ ಹೋಗಿ ಗ್ರಾಮಕ್ಕೆ ಬಸ್ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಿ ಗ್ರಾಮದ ಜನರಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ ಗ್ರಾಂ ಪಂ ಸದಸ್ಯ.

ಹೌದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮ ಪಂಚಾಯಿತಿಯ ೨ ವಾರ್ಡ್ ಸದಸ್ಯ ಲಿಂಗರಾಜು ಕಾಲವಾಡ್ ಗ್ರಾಮದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಖುದ್ದಾಗಿ ಬೆಂಗಳೂರಿನಲ್ಲಿರುವ ವಿಧಾನಸೌಧಕ್ಕೆ ಹೋಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಳಿ ಹೋಗಿ ಗ್ರಾಮದಲ್ಲಿ ಉಂಟಾದ ಸಾರಿಗೆ ಸಮಸ್ಯೆ ಹೇಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಾಮದ ಸಮಸ್ಯೆ ಆಲಿಸಿದ ಸಚಿವ ತಕ್ಷಣ ಬಸ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ..

ನಮ್ಮ ಗ್ರಾಮಕ್ಕೆ ಬಸ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲಿಂಗ ರೆಡ್ಡಿಗೆ ಧನ್ಯವಾದಗಳು ಹೇಳಿದ್ದಾರೆ ಗ್ರಾಂ ಪಂ ಸದಸ್ಯ ಲಿಂಗರಾಜು ಕಾಲವಾಡ್ ಲಿಂಗರಾಜು ಕಾಲವಾಡ್ ಅವರು ಕಾರ್ಯವನ್ನು ನಾವು ಮೆಚ್ಚಲೇಬೇಕು ಯಾಕೆಂದರೆ ಬಹುದಿನಗಳಿಂದ ಸಾರಿಗೆ ವ್ಯವಸ್ಥೆ ಸಮಸ್ಯೆ ಇತ್ತು ಸಾಕಷ್ಟು ಸಲ ಮನವಿ ಮಾಡಿದರು ಏನು ಪ್ರಯೋಜನವಾಗಿರಲಿಲ್ಲ ಇಂದು ಗ್ರಾಂ ಪಂ ಸದಸ್ಯ ಸಚಿವರು ಬಳಿ ಹೋಗಿ ಸಮಸ್ಯೆಯನ್ನ ದೂರ ಮಾಡಿದ್ದು ಹೆಮ್ಮೆಯ ವಿಷಯ ಎಂದು ಹೇಳುತ್ತಾರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು.

Tags:

error: Content is protected !!