ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಒಂದೇ ದಿನ ಎರಡು ಲೀವರ ಕಸಿ ಮಾಡಿ, ಸಾವಿನಂಚಿನಲ್ಲಿದ್ದವರ ಜೀವ ಉಳಿಸುವ ಅಪರೂಪದ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ .

ಅಂಗಾಂಗ ಕಸಿಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಈ ಭಾಗದಲ್ಲಿ ಒಂದೇ ದಿನ ಎರಡು ಲೀವರ ಕಸಿ ಮಾಡಿದ ಸಾಧನೆ ಇದೇ ಪ್ರಥಮ.
ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಕಂಠ ನೀಲಕಂಟಪ್ಪ ಉಂಬರ್ಜೆ (60) ಎಂಬುವರು ಹಾಗೂ ಸವದತ್ತಿ ತಾಲೂಕಿನ ಹಿರೆಬುದ್ನೂರ ಗ್ರಾಮದ ಯುವಕ, ತವರು ಮನೆಯಲ್ಲಿರುವ ತನ್ನ ಗರ್ಭಿಣಿ ಹೆಂಡತಿಯ ಭೇಟಿಗಾಗಿ ತೆರಳುತ್ತಿರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಣಮಂತ ಉದ್ದಪ್ಪಾ ಸರ್ವಿದ (21) ಎಂಬ ಯುಕನೋರ್ವನ ಮೆದುಳು ಮೃತಗೊಂಡ ನಂತರ ತಮ್ಮ ಅಂಗಾಂಗಳನ್ನು ದಾನ ಮಾಡಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಗಲಕೋಟೆಯ ಪೊಲೀಸ್ ಸಿಬ್ಬಂದಿಗೆ ಹಾಗೂ 63 ವರ್ಷದ ಮಂಗಳೂರಿನ ರೋಗಿಗಳಿಗೆ ಲೀವರ ಕಸಿ ಮಾಡಲಾಗಿದೆ.
ಯುವಕ ನೀಡಿದ ಎರಡು ಕಿಡ್ನಿಗಳಲ್ಲಿ ಒಂದನ್ನು ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ಮುಧೋಳದ ರೋಗಿಗೆ ಕಸಿ ಮಾಡಿದರೆ, ಇನ್ನೊಂದನ್ನು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿನ ರೋಗಿಗೆ ನೀಡಲಾಯಿತು. ಲೀವರ ಹಾಗೂ ಕಿಡ್ನಿ ಕಸಿಗೊಳಗಾದ ಮೂವರು ಗುಣಮುಖರಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಡಾ. ಸಂತೋಷ ಹಜಾರೆ ಅವರು ಹೇಳಿದ್ದಾರೆ.
ಯಶಸ್ವಿ ಕಸಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್ ಇ ಸಂಸ್ಥೆಯ ಕರ್ಯಾುಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ದಯಾನಂದ ಅವರು ಅಭಿನಂದಿಸಿದ್ದಾರೆ .