latest

ಇನ್ ನ್ಯೂಸ್ ಹಿರಿಯ ಪತ್ರಕರ್ತ ವಿಜಯ ಸಾರವಾಡ ಅವರಿಗೆ ಸನ್ಮಾನ

Share

ವಿಜಯಪುರ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆಯನ್ನ ಆಚರಿಸಲಾಯಿತು . ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು .

ವಿಜಯಪುರ ನಗರದ ಪೊಲೀಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದ್ದರು .ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ವಿಜಯಪುರ ಇನ್ ನ್ಯೂಸ್ ಹಿರಿಯ ವರದಿಗಾರದ ವಿಜಯ ಸಾರವಾಡ ಅವರ ಭೀಮಾತೀರದ ಹಂತಕರ ಕುರಿತು ಸರಣಿ ಕಾರ್ಯಕ್ರಮ ನೀಡಿದ್ದನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದರು,

ಇದೆ ವೇಳೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಇನ್ ನ್ಯೂಸ್ ವರದಿಗಾರರ ವಿಜಯ ಸಾರವಾಡ ಅವರ ಮಗನನ್ನು ಸಹ ಸನ್ಮಾನಿಸಿದು ವಿಶೇಷವಾಗಿತು .
ಶಾಸಕ ಬಸನಗೌಡ ಯತ್ನಾಳ್, ಜಿಲ್ಲಾಧಿಕಾರಿ ಟಿ ಭೂಬಾಲನ್, ಎಸ್ಪಿ ಹೃಷಿಕೇಶ್ ಸೇರಿದಂತೆ ಜಿಲ್ಲೆಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:

error: Content is protected !!