ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಹಾಡಹಗಲೇ ಕೊಡಲಿ-ಕುಡಗೋಲು ಹಿಡಿದುಕೊಂಡು ಓಡಾಡಿದ ಒಬ್ಬ ಆಸಾಮಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಆಸ್ತಿ ವಿಚಾರದಲ್ಲಿ ಜಗಳ ನಡೆದಿದೆ ಎನ್ನಲಾಗಿದೆ. ಒಂಟಿ ಮಹಿಳೆ ಮನೆಗೆ ಹೋಗಿ ಉಮೇಶ ಹಂಚಿನಮನಿ ಎಂಬಾತ ಖಾರದಪುಡಿ-ಮತ್ತು ಕೊಡಲಿ ಹಿಡಿದು ಹೋಗಿ ಧಮ್ಕಿ ಹಾಕಿದ್ದಾನಂತೆ. ಆಗ ಆತನ ಕೈಯಲ್ಲಿದ್ದ ಖಾರದಪುಡಿ ಮತ್ತು ಕೊಡಲಿಯನ್ನು ನೆರೆಯ ಮನೆಯವರು ಕಸಿದುಕೊಂಡಿದ್ದಾರೆ. ನನ್ನ ತಡೆಯ ಬನ್ನಿ ನೋಡೋಣ ಎಂದು ಉಮೇಶ ಹಂಚಿನಮನಿ ಆವಾಜ್ ಹಾಕಿ ಸಾಲದೆಂಬಂತೆ ಕೊಡಲಿ ಪ್ರದರ್ಶಿಸಿ ಬೆದರಿಕೆಯೊಡ್ಡಿದ್ದಾನಂತೆ. ಹೊತ್ತಿಲ್ಲದ ಹೊತ್ತಲ್ಲಿ ಕೊಡಲಿ ಹಿಡಿದು ಎಂಟ್ರಿ ಕೊಟ್ಟ ಉಮೇಶ ವರ್ತನೆಗೆ ಇಲ್ಲಿನ ಜನರು ಬೆಚ್ಚಿ ಬಿದ್ದಿದ್ದು, ಕುಟುಂಬಸ್ಥರು ಬೈಲಹೊಂಗಲ ಪೊಲೀಸರ ಮೊರೆ ಹೋಗಿದ್ದಾರೆ.
