ಕುಡಿದ ಮತ್ತಿನಲ್ಲಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದ ವ್ಯಕ್ತಿಯನ್ನು 112 ಸಿಬ್ಬಂದಿ ಟೀಂ ವೊಂದು ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಹಗ್ಗ ಬೀಡಿಸಿ, ಸ್ವತಃ ತಾವೇ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸುವಲ್ಲಿ ಯಶಸ್ವಿಯಾದ ಅಪರೂಪದ ಘಟನೆ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ನಿವಾಸಿ ನಲವತ್ತಾರು ವರ್ಷದ ಶಂಭುಲಿಂಗಯ್ಯ ಹುಲಸೋಗಿ , ನಿನ್ನೆ ಸಂಜೆ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದ, ಕೂಡಲೇ ಇದರ ಮಾಹಿತಿಯನ್ನು ಮನೆಯ ಮಹಿಳೆಯರು 112 ಕರೆ ಮಾಡಿ ಮಾಹಿತಿ ನೀಡಿದ್ದಾರೆ .
ಕೂಡಲೇ ಸಿಬ್ಬಂದಿ ಒಂದು ಕ್ಷಣವು ವ್ಯರ್ಥ ಮಾಡದೇ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದಾರೆ . ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ , 112 ಸಿಬ್ಬಂದಿ ಸಂಗನಗೌಡ ಹಾಗೂ ಗಣೇಶ ಹೆಂಬ್ಲಿಯವರ ಮಾದರಿಯ ಕಾರ್ಯಕ್ಕೆ ಕಲಘಟಗಿ ಠಾಣೆಯ ಅಧಿಕಾರಿಗಳು ಹಾಗೂ ನೆಲ್ಲಿಹರವಿ ಗ್ರಾಮಸ್ಥರು ಶ್ಲಾಘಿಸುತ್ತಿದ್ದಾರೆ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
