ಅವರೊಬ್ಬ ಫಾರ್ಮಾಸಿಸ್ಟ್. ಔಷಧಿ ವಿತರಣೆಯ ಉದ್ಯಮದ ಜೊತೆಗೆ ಕೃಷಿ ಕಡೆಗೂ ಒಲವು ಇಟ್ಟುಕೊಂಡವರು. ಸದ್ಯ ಡೆಂಗ್ಯೂ ಜ್ವರಕ್ಕೆ ರಾಮಭಾಣ ವಾಗಿರುವ ಹಣ್ಣೊಂದು ಬೆಳೆಯುತ್ತಿದ್ದಾರೆ. ತಮ್ಮ ಎರಡು ಎಕರೆ ಜಮೀನಿನಲ್ಲಿ ವಿದೇಶಿ ಕೆಂಪು ಹಣ್ಣು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಕೈ ತುಂಬ ಆದಾಯ ಪಡೆದು ಇತರ ರೈತರು ಈ ಬೆಳೆ ಬೆಳೆಯಲು ಮಾರ್ಗದರ್ಶನ ಜೊತೆಗೆ ಪ್ರೇರೆಪಣೆ ನೀಡುತ್ತಿದ್ದಾರೆ. ಅಂದ ಹಾಗೆ ಆ ಕೆಂಪು ಹಣ್ಣು ಯಾವದು? ಆ ಉದ್ಯಮಿ ರೈತ ಯಾರು ಅನ್ನೋ ಕುರಿತು ಇಲ್ಲಿದೆ ಡಿಟೇಲ್ಸ್…
ಬಸವನಾಡು ವಿಜಯಪುರ ಜಿಲ್ಲೆ ಬರಗಾಲಕ್ಕೂ ಖ್ಯಾತಿ. ತೋಟಗಾರಿಕೆ ಬೆಳೆಯು ದರಲ್ಲಿ ಪ್ರಖ್ಯಾತಿ ಪಡೆದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಗ್ರಾಮದ ಔಷಧ ಉದ್ಯಮಿಗಳಾಗಿರುವ ಸಿ.ಎಮ್. ಮಾಲಿಪಾಟೀಲ ಇವರು ಹೊಸ ಪ್ರಯೋಗ ಮಾಡಿ ಯಶಸ್ವಿ ಯಾಗಿದ್ದಾರೆ. ತಮ್ಮ ಎರಡು ಎಕರೆಯಲ್ಲಿ ವಿದೇಶಿ ಮೂಲದ ಕೆಂಪು ಹಣ್ಣಾಗಿರುವ ಡ್ರ್ಯಾಗನ್ ಹಣ್ಣು ಬೆಳೆದು ಕೈತುಂಬ ಆದಾಯ ಬೆಳೆಯುತ್ತಿದ್ದಾರೆ. ಮೊದಲ ಹಂತದಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಡ್ರ್ಯಾಗನ್ ಮಾತ್ರ ಮಾರಾಟವಾಗುತ್ತಿತ್ತು. ಈ ಎರಡನೇ ಸೀಸನ್ ಪ್ರಸ್ತುತ ನಡೆಯುತ್ತಿದೆ. ಈ ಅವಧಿಯಲ್ಲಿ ಇಲ್ಲಿಯವರೆಗೆ 3 ಲಕ್ಷ ರೂಪಾಯಿ ಮೌಲ್ಯದ ಡ್ರ್ಯಾಗನ್ ಹಣ್ಣು ಮಾರಾಟವಾಗಿದೆ. ಡಿಸೆಂಬರ್ ತಿಂಗಳವರೆಗೆ ಹಣ್ಣುಗಳು ಸಿಗುತ್ತದೆ.
ಕಾಯಿ ಬಿಟ್ಟ 25 ದಿನಗಳ ನಂತರ ಡ್ರ್ಯಾಗನ್ ಫ್ರೂಟ್ ಕಿತ್ತು, ಪ್ರತಿ ಕೆಜಿಗೆ ₹ 180 ರಂತೆ ವ್ಯಾಪಾರಿಗಳಿಗೆ ಮನೆಯಲ್ಲಿ ಮಾರಾಟ ಮಾಡಲಾಗುತ್ತದೆ. ಡ್ರ್ಯಾಗನ್ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯವಿದೆ. ಒಮ್ಮೆ ಹೂಡಿಕೆ ಮಾಡಿದರೆ 25 ವರ್ಷಗಳವರೆಗೆ ಹಣ ಬರುತ್ತಲೇ ಇರುತ್ತದೆ. ಅಲ್ಲದೇ ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲರಿಂದ ಆಗಿರುವ ಜಲಕ್ರಾಂತಿಯಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುವತ್ತ ಪ್ರೇರೆಪಣೆ ಸಿಗುತ್ತಿದೆ. ಅಲ್ಲದೇ ಸಚಿವ ಎಂ.ಬಿ.ಪಾಟೀಲರಿಗೆ ಅಭಿನಂಧನೆ ಸಲ್ಲಿಸಲೇಬೇಕು ಎನ್ನುತ್ತಾರೆ ಸಿಎಮ್ ಮಾಲಿಪಾಟೀಲ.
ಇನ್ನೂ ಸಾವಯವ ಕೃಷಿ ಪದ್ಧತಿಯ ಜತೆಗೆ ಹನಿ ನೀರಾವರಿ ವ್ಯವಸ್ಥೆಯ ಮೂಲಕ ಡ್ರಾಗನ್ ಫ್ರೂಟ್ಸ್ ಬೆಳೆದು ಕೈ ತುಂಬಾ ಹಣ ಸಂಪಾದಿಸುವಂತಾಗಿದೆ. ಡ್ರ್ಯಾಗನ್ ಫ್ರೂಟ್ಸ್ ಬೆಳೆಯಿಂದ ಉತ್ತಮ ಲಾಭ ದೊರೆಯುತ್ತಿದ್ದು, ಆರ್ಥಿಕವಾಗಿ ಸುಧಾರಣೆ ಕಂಡಿದೆ. ಈ ಹಣ್ಣು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಬೆಳೆಯಲಾಗುತ್ತಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಅದರಲ್ಲಿ ಸದ್ಯ ಡೆಂಗ್ಯೂ ಜ್ವರ ಹೆಚ್ಚಾಗಿದ್ದು ಡೆಂಗ್ಯೂ ಜ್ವರಕ್ಕೆ ಡ್ರ್ಯಾಗನ್ ರಾಮಭಾಣ ಎನ್ನಬಹುದು. ಪ್ರತಿ ವರ್ಷದ ಮಳೆಗಾಲದ ಸಮಯದಲ್ಲಿ ಲಕ್ಷಗಳ ಲೆಕ್ಕದಲ್ಲಿ ಡ್ರ‍್ಯಾಗನ್ ಫ್ರೂಟ್ ಫಸಲು ಕಟಾವಿಗೆ ಬರುತ್ತಿರುವುದು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಇನ್ನು ಡ್ರ‍್ಯಾಗನ್ ಫ್ರೂಟ್ ಸಸಿಗಳನ್ನು ತಂದು ರೈತ ಮಾಲಿಮಾಟೀಕ ನೆಡುವಾಗ ಈ ಭಾಗಕ್ಕೆ ಅದು ಹೊಸ ಹಣ್ಣು. ಈಗ ಡ್ರ‍್ಯಾಗನ್ ಫ್ರೂಟ್ ಕಟಾವಿನ ಸಮಯದಲ್ಲಿ ಕೊಂಡುಕೊಳ್ಳಲು ಹಣ್ಣಿನ ವ್ಯಾಪಾರಸ್ಥರು ಇಟ್ಟಂಗಿಹಾಳ ಗ್ರಾಮದ ತೋಟಕ್ಕೆ ಬರುತ್ತಿದ್ದಾರೆ. ಅಲ್ಲದೇ ರೈತರು ಕೂಡಾ ಮಾಲಿಪಾಟೀಲರಿಂದ ಡ್ರ್ಯಾಗನ್ ಬೆಳೆಯುವ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ತಾವು ಬೆಳೆಯಲು ಚಿಂತನೆ ನಡೆಸಿದ್ದಾರೆ.
ಒಟ್ನಲ್ಲಿ ಔಷಧಿ ಉದ್ಯಮಿಯಾಗಿರುವ ಸಿಎಮ್ ಮಾಲಿಪಾಟೀಲ ಇವರ ಡ್ರ್ಯಾಗನ್ ಬೆಳೆ ಎರಡು ಎಕರೆಯಲ್ಲಿ ನಾಲ್ಕು ಸಾವಿರ ಗಿಡಗಳಲ್ಲಿ ಕೆಂಪಾದ ಬೃಹತ್ ಆಕಾರದ ಹಣ್ಣುಗಳು ಕಂಗೊಳಿಸುತ್ತಿವೆ. ಅಲ್ಲದೇ ಇತರೆ ರೈತರಿಗೆ ಡ್ರ್ಯಾಗನ್ ಬೆಳೆ ಕುರಿತು ಮತ್ತೊಬ್ಬರಿಗೆ ಜಾಗೃತಿ ಜೊತೆಗೆ ತಿಳುವಳಿಕೆ ನೀಡಿ ಮಾದರಿಯಾಗಿದ್ದಾರೆ.