inauguration

ಕಾಗವಾಡ ತಾಲೂಕಿನ ಉಗಾರ ಖುರ್ದದಲ್ಲಿ ಮರಾಠಾ ಸಮಾಜ ಭವನದ ಉದ್ಘಾಟನೆ ನೆರವೇರಿಸಿದ ಶಾಸಕ ರಾಜು ಕಾಗೆ.

Share

ಸಮಾಜದಲ್ಲಿ ಕಟ್ಟು ಕಡೆಯ ವ್ಯಕ್ತಿಗಳಾದ ನಮ್ಮ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು, ಶೌಚಾಲಯ ಸ್ವಚ್ಛಗೊಳಿಸುವ ಭಂಗಿ ಇಂತಹ ವ್ಯಕ್ತಿಗಳನ್ನು ಯಾವಾಗ ಸಮಾರಂಭಗಳಲ್ಲಿ ಸನ್ಮಾನಿಸಿ ಅವರ ಸೇವೆ ಶ್ಲಾಘೀಸುತ್ತೇವೆ ಆಗ ನಮ್ಮ ಭಾರತ ದೇಶದಲ್ಲಿ ಬದಲಾವಣೆಯಾಗಲಿದೆ ಎಂದು ನಾನು ಭಾವಿಸುತ್ತೇನೆಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅಭಿಪ್ರಾಯ ಪಟ್ಟರು.

ರವಿವಾರ ರಂದು ಉಗಾರ ಖುರ್ದ ಪಟ್ಟಣದಲ್ಲಿ ನಗುರೊತ್ತಾನ ಯೋಜನೆಯಡಿಯಲ್ಲಿ ಸುಮಾರು ೧೨ ಲಕ್ಷ ರೂ. ವೆಚ್ಚುಮಾಡಿ ಕಟ್ಟಿಸಿದ ಮರಾಠಾ ಸಮಾಜದ ಭವನದ ಉದ್ಘಾಟನೆ ನೆರವೇರಿಸಿ ಶಾಸಕ ರಾಜು ಕಾಗೆ ಮಾತನಾಡಿದರು.

ಅನೇಕ ಸಮಾರಂಭಗಳಲ್ಲಿ ಶಾಸಕರನ್ನು ಹಾಗೂ ಚುನಾಯಿತ ಸದಸ್ಯರನ್ನು ಸನ್ಮಾನಿಸುವುದು ವಿರಳ. ಆದರೆ ಯಾವ ವ್ಯಕ್ತಿ ನಮ್ಮ ನಗರವನ್ನು ಸ್ವಚ್ಛಗೊಳಿಸಿ ನಮ್ಮನ್ನು ಆರೋಗ್ಯವಂತವಾಗಿ ಉಳಿಯಲು ಸಹಕರಿಸುತ್ತಾರೆ, ಅವರನ್ನು ಸನ್ಮಾನಿಸಬೇಕೆಂದು ಹೇಳಿ ಸನ್ಮಾನ ಸಮಾರಂಭಗಳಲ್ಲಿ ಹಾರು, ತುರಾಯಿ ಶಾಲಗಳು ಬಳಿಸಬೇಡಿ. ಇದೊಂದು ಸಮಯ ವ್ಯರ್ಥ ಕೆಲಸ ಹಾಗೂ ಆರ್ಥಿಕ ವೆಚ್ಚವಾಗುತ್ತದೆ. ಇದರ ಬದಲಾವಣೆ ಆಗಬೇಕೆಂದು ಮನಸು ಬಿಚ್ಚಿ ಹೇಳಿದರು. ಸನ್ಮಾನ ಮಾಡುವಾಗ ಹಾರು ತುರಾಯಿ ನೀಡದೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ, ಸಸಿಗಳನ್ನು ನಟ್ಟರೆ ನನಗೆ ಸಂತೋಷವಾಗುತ್ತದೆ. ನನಗೆ ಸನ್ಮಾನಿಸಿರುವ ಶಾಲಗಳು ಪ್ರತಿವರ್ಷ ಸಿದ್ಧಗಂಗಾ ಮಠದ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿ ಅವರಿಗೆ ಭೋಜನದ ವ್ಯವಸ್ಥೆ ಮಾಡುತ್ತಾ ಬಂದಿದ್ದೇನೆಂದು ಶಾಸಕರು ಹೇಳಿದರು.

ಉಗಾರ ಮರಾಠಾ ಸಮಾಜದ ಅಧ್ಯಕ್ಷ ವಿಶ್ವನಾಥ ಶಿರಸಾಟ, ರಾಮಚಂದ್ರ ಥೋರುಶೆ ಇವರಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿಯ ಸದಸ್ಯ ಪ್ರಫುಲ ಥೋರುಶೆ ಪ್ರಾಸ್ತಾಯಕವಾಗಿ ಸಮಾಜದ ಏಳಿಗೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು..

ಮರಾಠಾ ಸಮಾಜದ ಉಪಾಧ್ಯಕ್ಷ ವಿಜಯ ಥೋರುಶೆ, ಕಾರ್ಯದರ್ಶಿ ಸುರೇಶ ದೇಸಾಯಿ, ಸಂಚಾಲಕರಾದ ಅಮರ ಜಗತಾಪ, ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ಗುತ್ತಿಗೆದಾರರಾದ ವಿಕಾಸ ಪಾಂಢರೆ, ಮುಖ್ಯಾಧಿಕಾರಿ ಸುನೀಲ ಬಬಲಾದಿ, ಸಂದೀಪ್ ಖರಾಡೆ, ಅಭಿಯಂತ ಎಂ.ಎಸ್.ಪಠಾಣ, ಸಮಾಜದ ಹಿರಿಯರಾದ ರಾಮಚಂದ್ರ ಥೋರುಶೆ, ರಾವಸಾಬ್ ಮುಳಿಕ, ಸಂದೀಪ ಜಾಧವ, ವಿಜಯ್ ಢೇರೆ, ಯೋಗೇಶ ಘಾಟಗೆ, ದೀಪಕ ಶಿಂದೆ, ಸತೀಶ ಜಗತಾಪ, ಶ್ರೀಮತಿ ಶೋಭಾ ಶಿರಸಾಟ, ನಿರ್ಮಲ ಢೇರೆ, ರೂಪಾ ಭೋಸಲೆ, ಸ್ವಪ್ನಾಲಿ ಭೋಸಲೆ ಸೇರಿದಂತೆ ಅನೇಕರು ಇದ್ದರು. ಮರಾಠಾ ಸಮಾಜದ ಇನ್ನೂಳಿದ ಅಭಿವೃದ್ಧಿಗಾಗಿ ೨೦ ಲಕ್ಷ ರೂ. ನೀಡುವುದಾಗಿ ಶಾಸಕ ರಾಜು ಕಾಗೆ ಘೋಷಣೆ ಮಾಡಿದರು.

Tags:

error: Content is protected !!