FUNCTION

ಹುಕ್ಕೇರಿಯಲ್ಲಿ ಶಾಂತಿಯುತ ಮೋಹರಂ ಆಚರಿಸೋಣ ಪಿ ಆಯ್ ಮಹಾಂತೇಶ ಬಸ್ಸಾಪೂರೆ.

Share

ಸೌಹಾರ್ಧತೆಗೆ ಇನ್ನೊಂದು ಹೇಸರೆ ಹುಕ್ಕೇರಿ ನಗರ ಎಂದು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಹೇಳಿದರು.

ಅವರು ಇಂದು ಮೋಹರಂ ಹಬ್ಬದ ಅಂಗವಾಗಿ ಸರ್ವ ಧರ್ಮದ ಮುಖಂಡರೊಂದಿಗೆ ಶಾಂತಿ ಸಭೆಯಲ್ಲಿ ಮಾತನಾಡುತ್ತಾ ಹುಕ್ಕೇರಿ ನಗರದಲ್ಲಿ ಜಾತಿ ಭೇಧ ವಿಲ್ಲದೆ ಎಲ್ಲ ಸಮೂದಾಯದವರು ಒಗ್ಗಟ್ಟಿನಿಂದ ತಮ್ಮ ದಿನ ನಿತ್ಯದ ವ್ಯವಹಾರಗಳನ್ನು ಮಾಡುತ್ತಾ ಸೌಹಾರ್ಧತೆ ಜೀವನ ನಡೆಸುತ್ತಾರೆ ಇದನ್ನು ನಾವು ಕೇವಲ ಹುಕ್ಕೇರಿ ನಗರದಲ್ಲಿ ಕಾಣಬಹುದು ಕಾರಣ ಮುಂಬರುವ ಮೋಹರಂ ಹಬ್ಬದಲ್ಲಿ ಶಾಂತ ರೀತಿಯಿಂದ ಶ್ರದ್ಧಾ ಭಕ್ತಿಯಿಂದ ಆಚರಿಸೋಣ ಎಂದರು
ವೇದಿಕೆ ಮೇಲೆ ಹನ್ನೊಂದು ಜಮಾತ ಅದ್ಯಕ್ಷ ಸಲಿಂ ನದಾಫ್, ಮೋಮಿನದಾದಾ, ಉದಯ ಹುಕ್ಕೇರಿ, ರಾಜು ಮುನ್ನೋಳ್ಳಿ, ಉಪಸ್ಥಿತರಿದ್ದರು.
ನಂತರ ವಿವಿಧ ಸಮಾಜದ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿಂದೂ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!