ಖಾನಾಪೂರ ತಾಲೂಕಿನ ನಂದಗಡದ ಮುಸ್ಲಿಂ ಸಮುದಾಯದ ರಾಯಾಪೂರ ಮತ್ತು ಪೂರಾಣಿಗಲ್ಲಿಗೆ ಸಂಬಂಧಿತ ಕಬರಸ್ಥಾನಕ್ಕೆ ಹೋಗುವ ರಸ್ತೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಇದರಿಂದ ಅಂತ್ಯಕ್ರಿಯೆ ನಡೆಸಲು ಮುಸ್ಲಿಂ ಸಮುದಾಯಕ್ಕೆ ಸಮಸ್ಯೆ ಎದುರಾಗಿದೆ.
ಮಳೆಯ ರಭಸಕ್ಕೆ ಕಬರಸ್ಥಾನಗೆ ಹೋಗುವ ರಸ್ತೆ ಕುಸಿತಗೊಂಡಿದ್ದು, ಅಂತ್ಯಕ್ರಿಯೆಗೆ ತೆರಳಲು ತೊಂದರೆಯುಂಟಾಗಿದೆ. ಕಳೆದ ಒಂದು ವರ್ಷದ ಹಿಂದೆಯೇ ಏನ್ ಆರ್ ಇ ಜಿ ಯೋಜನೆಯಡಿ ಹತ್ತು ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಕಾಮಗಾರಿ ಯಾವ ಹಂತಕ್ಕೆ ತಲುಪಿದೆ ಎಂಬ ಮಾಹಿತಿಯಿಲ್ಲ. ಈ ರಸ್ತೆ ನಂದಗಡದಿಂದ ಕಸಬಾ ನಂದಗಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಇದರ ಬಗ್ಗೆ ಕೂಡಲೇ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಬೋಟೇಕರ್ ಒತ್ತಾಯಿಸಿದ್ದಾರೆ.
ಮುಸ್ಲಿಂ ಸಮುದಾಯದ ರಾಯಾಪೂರ ಮತ್ತು ಪುರಾಣಿಗಲ್ಲಿಗೆ ಸಂಬಂಧಿತ ಕರ್ಬಸ್ಥಾನಕ್ಕೆ ಹೋಗುವ ಕುಸಿದಿದೆ. ಈಗಾಗಲೇ ಎರಡು ಜಮಾತಿನ ಮೌಲ್ವಿಗಳ ಮತ್ತು ಪಿಡಿಓ ಅವರ ಗಮನಕ್ಕೆ ತರಲಾಗಿದೆ. ಇದಕ್ಕೆ ಅಧ್ಯಕ್ಷರು ಮತ್ತು ಪಿಡಿಓ ಕೂಡಲೇ ಸ್ಪಂದಿಸುವ ಮೂಲಕ ಈ ರಸ್ತೆ ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರಾದ ಶಫೀ ಖಾಜಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಯಾಪೂರ ಮುಸ್ಲಿಂ ಸಮುದಾಯದ ಕಾರ್ಯದರ್ಶಿ ಮುನ್ನಾ ಸಕಲಿ ಉಪಸ್ಥಿತರಿದ್ದರು.