ರಾಯಬಾಗ ತಾಲೂಕಿನ ನಿಪಣಾಳ ಗ್ರಾಮದಲ್ಲಿ ಹಿಂದವಿ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜೀ ಮಹಾರಾಜರ ಅಶ್ವಾರೂಢ ಮೂರ್ತಿಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಿತು.
ರಾಯಬಾಗ ತಾಲೂಕಿನ ನಿಪಣಾಳ ಗ್ರಾಮದಲ್ಲಿ ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ ಗ್ರಾಮದಲ್ಲಿ ಹಿಂದವಿ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜೀ ಮಹಾರಾಜರ ಅಶ್ವಾರೂಢ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭವನ್ನು ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.
ಪ.ಪೂ. ಜಗದ್ಗುರು ವೇದಾಂತಾಚಾರ್ಯ ಮತ್ತು ಸೋಮಲಿಂಗೇಶ್ವರ ದೇವರುಷಿಗಳ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯುವನಾಯಕ ರಾಹುಲ್ ಜಾರಕಿಹೊಳಿ, ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ರಮಾಕಾಂತ ಕೊಂಡುಸ್ಕರ್, ಸುರೇಶರಾವ ಸಾರೆ ಸೇರಿದಂತೆ ಇನ್ನುಳಿದ ಗಣ್ಯರು ಭಾಗಿಯಾಗಿದ್ಧರು.
ಮೊದಲಿಗೆ ಪೂರ್ಣಕುಂಭ ಮೆರವಣಿಗೆ ನಡೆಯಿತು.