Kagawad

ನದಿ ನೀರಿನಲ್ಲಿ ಹೆಚ್ಚಳ; ಕಾಗವಾಡ ತಾಲೂಕಿನ ಜನ-ಜಾನುವಾರು ಸ್ಥಳಾಂತರ

Share

ಅತಿವೃಷ್ಠಿಯಿಂದಾಗಿ ನದಿ ನೀರಿನಲ್ಲಿ ಹೆಚ್ಚಳವಾದ ಹಿನ್ನೆಲೆ ಕಾಗವಾಡ ತಾಲೂಕಿನ ಕುಸನಾಳ ಸೇರಿದಂತೆ ನದಿತೀರದ ಜನ – ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕುಸನಾಳ, ಕೃಷ್ಣಾ -ಕಿತ್ತೂರ, ಮಂಗಾವತಿ, ಗ್ರಾಮಗಳಿಂದ ಜನಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಬೆಳಿಗ್ಗೆಯಿಂದ ಪ್ರಾರಂಭಗೊಂಡಿದೆ. ಉಗಾರ ಗ್ರಾಮದಲ್ಲಿ ರಸ್ತೆ ಸಂಪರ್ಕ ಕಳೆದುಕೊಂಡಿದೆ. ನದಿ ತೀರದ ಮನೆಗಳಲ್ಲಿ ನೀರು ನುಗ್ಗುವ ಸ್ಥಿತಿ ಎದುರಾಗಿದೆ.

ಕಾಗವಾಡ ತಹಶೀಲ್ದಾರರಾದ ರಾಜೇಶ್ ಬುರ್ಲಿ ಪಿಎಸ್ಐ ಎಮ್ ಬಿ. ಬಿರಾದಾರ್- ಪಾಟೀಲ ಹಾಗೂ ಗ್ರಾಮ ಪಂಚಾಯತ ಸದಸ್ಯರ ಉಪಸ್ಥಿತಿಯಲ್ಲಿ ಜನಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಯಿತು. ಕುಸನಾಳ ಗ್ರಾಮದಿಂದ ಸುಮಾರು 300 ಜಾನುವಾರಗಳನ್ನು ಉಗಾರ ಬುದ್ರುಕ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಕೆಲ ಕುಟುಂಬಗಳು ತಮ್ಮ ಆಪ್ತರ ಮನೆಗಳಿಗೆ ಜಾನುವಾರಗಳ ಸಮೇತ ರವಾನಿಸಿದ್ದಾರೆ. ಅಪಾಯವನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಉಗಾರ ಖುರ್ದ್ ಗ್ರಾಮದ ಹತ್ತಿರ ನದಿಯಲ್ಲಿರುವ ಬ್ಯಾರೇಜ್ ಮೇಲೆಂದ ಸುಮಾರು 20 ಅಡಿ ಮತ್ತು ಕುಡಚಿ ಸೇತುವೆ ಮೇಲಿನ 10 ಅಡಿ ನೀರು ಹರಿಯುತ್ತಿದೆ.

ಇನ್ನು ಸುಮಾರು 400 ರಿಂದ 500 ಕುಟುಂಬಗಳು ಸ್ಥಳಾಂತರಿಸ ಬೇಕಾಗಿದೆ, ಜುಗುಳ, ಮಂಗಾವತಿ ಮತ್ತು ಶಹಾಪುರದಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸದ್ಯಕ್ಕೆ ಕಾಗವಾಡ ದಿಂದ ಜಮಖಂಡಿ ಮಾರ್ಗವಾಗಿ ಸಂಚರಿಸುವ ಸೇವೆ ಸ್ಥಗಿತಗೊಂಡಿದ್ದು ಇದೇ ರೀತಿ ಉಗಾರ ಕುಸುನಾಳ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದ ಬದಲಿಗೆ ಕಾಗವಾಡ -ಮಂಗಸೂಳಿ ,ಅಥಣಿ ಮಾರ್ಗವಾಗಿ ಹಾರೂಗೇರಿ ಮುಖಾಂತರ ಜಮಖಂಡಿ ಬಾಗಲಕೋಟಗೆ ಸಂಪರ್ಕವನ್ನು ಕಲ್ಪಿಸಲಾಗಿದೆ.

Tags:

error: Content is protected !!