ರಾಯಬಾಗ ಪಟ್ಟಣದ ಗ್ರಾಮೀಣ ಪ್ರದೇಶದ ಪೂಜಾರಿ ತೋಟದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೂಲಭೂತ ವ್ಯವಸ್ಥೆ ಇಲ್ಲ ಎಂದು ಇನ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು ವರದಿಯನ್ನು ನೋಡಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣವರು ಶಾಲೆಯ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .
ರಾಯಬಾಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಪೂಜಾರಿ ತೋಟದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಬಗ್ಗೆ ಕಳೆದ ದಿನ ಹಿಂದೆ ನಿಮ್ಮ ಇನ್ ನ್ಯೂಸ್ ವಾಹಿನಿಯಲ್ಲಿ ಸುದ್ದಿ ಬಿತ್ತರಿಸಲಾಯಿತು , ಇನ್ ನ್ಯೂಸ್ ವಾಹಿನಿ ಸುದ್ದಿಗೆ ಎಚ್ಚತುಕೊಂಡ ಕುಡಚಿ ಶಾಸಕ ಮಹೇಂದ್ರ ತಮ್ಮಣವರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು , ಅಧಿಕಾರಿಗಳಿಂದ ಹಾಗೂ ಎಸ್ ಡಿ ಎಂ ಸಿ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ,ಮುಖಂಡರುಗಳಿಗೆ ಇಲಾಖೆ ಅಧಿಕಾರಿಗಳೋಂದಿಗೆ ಚರ್ಚಿಸಿದರು.
ಕುಡಚಿ ಮತಕ್ಷೇತ್ರದ ಶಾಸಕರು ಬಂದು ಶಾಲೆಯ ಸಮಸ್ಯೆಯನ್ನು ಅರಿತು ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಸಚಿವರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಿ ಕೊಡುವ ಭರವಸೆ ನೀಡಿದರು.
ಇನ್ನೂ ರಾಯಬಾಗ್ ವಿಧಾನಸಭಾ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಇಂತಹ ಸಮಸ್ಯೆಗಳು ಕಂಡಲ್ಲಿ ಕೂಡಲೇ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು ಆದರೆ ಈ ಶಾಲೆಯ ಪರಿಸ್ಥಿತಿ ಈ ಮಟ್ಟಕ್ಕೆ ಎದ್ದಿದೆ ಆದರೂ ಕೂಡ ಈ ಶಾಲೆಗೆ ಏಕೆ ಭೇಟಿ ನೀಡಿಲ್ಲ ಎನ್ನುವುದು ಕ್ಷೇತ್ರದ ಜನರ ಪ್ರಶ್ನೆಯಾಗಿದೆ.