hubbali

ಡಿಕೆ ಶಿವಕುಮಾರ್ ಅವರನ್ನು ಮತ್ತೊಮ್ಮೆ ಬಿಜೆಪಿ ಮುಟ್ಟಿದ್ರೆ ಪಕ್ಷ ನಿರ್ಮೂಲನೆ- ಮಹಮ್ಮದ್ ‌ನಲಪಾಡ್ …

Share

ಒಂದು ಸಾರಿ ಡಿಕೆ ಶಿವಕುಮಾರ್ ಮುಟ್ಟಿದ್ದಕ್ಕೆ ಬಿಜೆಪಿಯವರು 66 ಸೀಟ್ ಗೆ ಹೋಗಿದ್ದಾರೆ. ಇನ್ನೊಂದು ಸಾರಿ ಮುಟ್ಟಿ ನೋಡಿದ್ರೆ ನಿರ್ಮೂಲನೆ ಆಗಿ ಬಿಡ್ತಾರೆ ಎಂದು ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ವಾಲ್ಮೀಕಿ ‌ಅಭಿವೃದ್ದಿ ನಿಗಮದ ಹಗರಣ ವಿಚಾರ ಮಾತನಾಡಿ, ಸರ್ಕಾರ ನಡೆಸೋಕೆ ಅಧಿಕಾರಿಗಳು ಬಹಳ‌ ಮುಖ್ಯ. ಅಧಿಕಾರಿಗಳನ್ನ ಕಂಟ್ರೋಲ ಮಾಡೋದು ಮಿನಿಸ್ಟರ್ ಕೆಲಸ. ಇಡಿ ಇವಾಗ ವಶಕ್ಕೆ ತಗೆದುಕೊಂಡಿದೆ ಅಂತಾ ಹೇಳತೀರಿ.. ನಾನು ಅದನ್ನ‌‌ ಒಪ್ಪತೀನಿ.

ಬಿಜೆಪಿಯವರು ಹಗರಣ ಮಾಡಿದಾಗ ಇಡಿ ಎಲ್ಲಿತ್ತು. ಸಿಬಿಐ,ಒಂದೇ ಒಂದು‌ ಬಿಜೆಪಿ ನಾಯಕರ ಮೇಲೆ ಆ್ಯಕ್ಷನ್ ಆಗಿದೆಯಾ. ಅವರೆಲ್ಲ ಹರಿಶ್ಚಂದ್ರನ ಮೊಮ್ಮಕ್ಕಳಾ? ಯಡಿಯೂರಪ್ಪ ಜೈಲಿಗೆ ಹೋಗಿದ್ದು ನೆನಪಿಲ್ಲವಾ. ನಾವೇ ಜೈಲಿಗೆ ಕಳಸಿದ್ದೇವೆ ಎಂದು ಮಾತಿನ‌ ಭರದಲ್ಲಿ ಹೇಳಿದರು,ನಂತರ ಯಡಿಯೂರಪ್ಪ ಅವರದೇ ಸರ್ಕಾರದಲ್ಲಿ ಜೈಲಿಗೆ ಹೋಗಿದ್ರು ಎಂದರು.

ಅವರ ಮಗ ತಾನೇ ವಿಜಯೇಂದ್ರ,ಅವರೇನು ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ವಲ್ವಾ.ಬಿಜೆಪಿ ನಾಯಕರು ಇವಾಗ ಮಾತಾಡುತ್ತಿದ್ದಾರೆ. 40 ಪರ್ಸೆಂಟ್ ಎಲ್ಲಿ ಹೋಯ್ತು. ಅವಾಗ ಸಿಬಿಐ,ಇಡಿ ಎಲ್ಲಿ ಮಲಗಿತ್ತು,ಇವಾಗ ಓಡೋಡಿ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸುಧಾಕರ್ ದುಡ್ಡು ಹೊಡೆದ್ರು. ಡಿಕೆ ಶಿವಕುಮಾರ್ ಕೇಸ್ ಬೇರೆ,ಯಡಿಯೂರಪ್ಪ ಕೇಸ್ ಬೇರೆ. ಬಿಜೆಪಿಯವರು ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ ನವರು ಬಂದ್ರೆ ಮಾತ್ರ ಇಡಿ,ಸಿಬಿಐ. ಇದೀಗ ನಾವ ಯಾವ ಸಿಬಿಐ,ಇಡಿಗೆ ಹೆದರಲ್ಲ..
ನೂರು ಇಡಿ ಬರಲಿ,ನೂರು ಸಿಬಿಐ ಬರಲಿ ಕಾಂಗ್ರೆಸ್ ವೈಟ್ ಟೀ ಶರ್ಟ್ ಆರ್ಮಿ ಹೆದರಲ್ಲ ಎಂದರು.

ವಾಲ್ಮೀಕಿ ಹಗರಣ ಸ್ಕ್ಯಾಮ್ ಅಂತಾ ನಾನ ಒಪ್ಪೋಕೆ ಆಗಲ್ಲ. ನಾನೇನ ಪೊಲೀಸ್ ನಾ? ಬಿಜೆಪಿಯವರಿಗೆ ಧಮ್ ತಾಕತ್ತು ಇದ್ರೆ ನ್ಯಾಯುತವಾಗಿ ಹೋರಾಟ ಮಾಡಲಿ. ಮುಡಾ ಹಗರಣ ಆಗಿರೋದು ಬಿಜೆಪಿ ಕಾಲದಲ್ಲಿ. ಸಿದ್ದರಾಮಯ್ಯ ಕುರುಬ ಸಮುದಾಯದವರು.
ಅವರು ಎರಡನೇ ಬಾರಿ ಸಿಎಂ ಆಗಿರೋದು‌ ಬಿಜೆಪಿಗೆ ಸಹಿಸೋಕೆ ಆಗಲ್ಲ. ಯಾರೋ ನಾಲ್ಕು ಜನ‌ ಲೀಡರ್ ಮಾತಾಡಿದ್ರೆ ಏನೂ ಆಗಲ್ಲ.
ಜನ‌ ನಮ್ಮ‌ ಪರ ಇದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ಯುವ ವಿಕಾಸ ಶಿಬಿರ..ನಗರದಲ್ಲಿಂದು ಕಾಂಗ್ರೆಸ್ ನಿಂದ ಯುವ ವಿಕಾಸ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುವ ವಿಕಾಸ ಶಿಬಿರ ನಲಪಾಡ್ವ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಯುವ ಘಟಕದ ರಾಜ್ಯಾಧ್ಯಕ್ಷ ಇರ್ತೀನೋ ಇಲ್ಲವೋ, ಪಕ್ಷದಲ್ಲಿ ಇರ್ತಿನಿ ಇಲ್ಲವೋ.ಆದ್ರೆ ನಾನು ಸಂವಿಧಾನದ ಪರವಾಗಿ ಇರ್ತೀನಿ. ನಮ್ಮ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ನಾವು ವೈಟ್ ಟೀ ಶರ್ಟ್ ಆರ್ಮಿ ಆಚರಣೆ ಮಾಡ್ತೀದ್ದೇವೆ. ಕಪಾಳಕ್ಕೆ ಹೊಡೆಯೋದು ಅಲ್ಲ,ವೈಟ್ ಟೀ ಶರ್ಟ್ ಆರ್ಮಿ ಇರೋವರೆಗೂ ನೀವು ರಾಹುಲ್ ಗಾಂಧಿ ಅವರನ್ನು ಕಣ್ಣೆತ್ತಿ ನೋಡಲು ಯೋಚನೆ ಮಾಡಬೇಕು. ಇವತ್ತು ಸಂವಿಧಾನ,ಹಾಗೂ ಕಾಂಗ್ರೆಸ್ ಆಶಯಗಳ ಬಗ್ಗೆ ಹಿರಿಯರು ಮಾತಾಡಲಿದ್ದಾರೆ..
ಇದು ಯವ ಶಿಬಿರ ಕಾರ್ಯಕ್ರಮ ಆಗಿರೋ ಕಾರಣಕ್ಕೆ ನಾವು ರಾಜ್ಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಮೂರು ಉಪಚುನಾವಣೆಗೆ ತಯಾರಿ ಮಾಡಲಿದ್ದೇವೆ.
ಮೂರು ಉಪಚುನಾವಣೆ ನಾವು ಗೆಲ್ತೀವಿ. ಮೂರು ಚುನಾವಣೆಗೆ ಪದಾಧಿಕಾರಿಗಳ ನಿಯೋಜನೆ ಮಾಡಲಿದ್ದೇವೆ ಎಂದರು.

Tags:

error: Content is protected !!