animals

ಹುಕ್ಕೇರಿ : ಕುರಿದೊಡ್ಡಿಯಲ್ಲಿ ತೋಳ ದಾಳಿ; 16 ಕುರಿಗಳ ಸಾವು

Share

ಹುಕ್ಕೇರಿ ನಗರದ ಹೊರವಲಯದಲ್ಲಿರುವ ಕುರುದೊಡ್ಡಿಯಲ್ಲಿ ತೋಳವೊಂದು ದಾಳಿ ನಡೆಸಿದ ಪರಿಣಾಮ 16 ಕುರಿ ಮರಿಗಳನ್ನು ಬಲಿಪಡೆದಿದ್ದು ಅನೇಕ ಕುರಿಗಳಿಗೆ ಗಾಯವಾಗಿದೆ.
ಹುಕ್ಕೇರಿ ಪಟ್ಟಣಕ್ಜೆ ಹೊಂದಿಕೊಂಡಿರುವ ಸೀಮೆ ಲಗಮವ್ವಾ ದೇವಸ್ಥಾನದ ಬಳಿ ಕುರುಗಾಯಿಗಳ ದೊಡ್ಡಿಯಲ್ಲಿ ತೋಳವೊಂದು ದಾಳಿ ನಡೆಸಿದ ಹಿನ್ನಲೆಯಲ್ಲಿ ಹಲವಾರು ಮರಿಗಳು ಸಾವನ್ನಪ್ಪಿವೆ.

ಈ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡಿದ ಕುರಿಗಾಯಿ ಬಸವರಾಜ ಘೋಡಗೇರಿ ಮತ್ತು ರಾಯಪ್ಪಾ ಹೆಗಡೆ ಅವರು, ನಾವು ಕುರಿ ಸಾಗಾಣಿಕೆ ಮೂಲಕ ಜೀವನ ನಡೆಸುತ್ತಿದ್ದೇವೆ. ನಮ್ಮ ಕುರಿ ದೊಡ್ಡಿ ಒಳಗೆ ತೋಳ ಬಂದು ನಮ್ಮ ಕುರಿಗಳ ಮೇಲೆ ದಾಳಿ ನಡೆಸಿದೆ. ಈ ಕುರಿತು ಪಶು ಆಸ್ಪತ್ರೆಗೆ ತೆರಳಿ ಮಾಹಿತಿ ನೀಡಿ 15 ಘಂಟೆ ಗತಿಸಿದರು ಯಾವೊಬ್ಬ ಪಶು ಅಧೀಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ. ಮೃತ ಕುರಿಗಳನ್ನು ನೋಡುತ್ತಾ ಅಧಿಕಾರಿಗಳ ದಾರಿ ಕಾಯುತ್ತಿದ್ದೆವೆ, ಇದೆ ರೀತಿ ಕಳೆದ ಬಾರಿ ತೋಳಗಳ ದಾಳಿಯಿಂದ 45 ಕುರಿಗಳು ಸಾವನ್ನಪ್ಪಿದ್ದವು. ಅದರ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೆ ಅವರು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ. ಕುರಿಗಾಯಿಗಳಿಗೆ ರಕ್ಷಣೆ ಇಲ್ಲದೆ ಹಾನಿ ಅನುಭವಿಸುತ್ತಿದ್ದವೆ ಕೂಡಲೇ ಸರ್ಕಾರ ನಮ್ಮ ನೇರವಿಗೆ ಬರಬೇಕು ಎಂದು ಆಗ್ರಹಿಸಿದರು.
ನಂತರ ಸಿದ್ದರಾಮ ತಟರಿ, ರಾಮಪ್ಪಾ ಮರಡಿ ಅವರು ಸತ್ತ ಕುರಿಗಳನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ತಮ್ಮ ಅಳಲು ತೋಡಿಕೊಂಡರು.

Tags:

error: Content is protected !!