Political

ಹಿಂದೂಗಳಿಗೆ ಅವಹೇಳನ : ರಾಹುಲ್ ಗಾಂಧಿ ಕ್ಷಮೆಯಾಚನೆಗೆ ವಿಜಯೇಂದ್ರ ಆಗ್ರಹ

Share

ಹಿಂದೂಗಳು ಹಿಂಸಾಚಾರಿಗಳು, ದ್ವೇಷಿಸುವವರು ಎಂಬ ಪಟ್ಟ ಕಟ್ಟಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಹುಸಂಖ್ಯಾತ ಹಿಂದುಗಳ ತೇಜೋವಧೆ ಹಾಗೂ ಅವಹೇಳನ ಮಾಡಿದ್ದಾರೆ. ಇದಕ್ಕಾಗಿ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದರು.
ಬೆಂಗಳೂರಿನ ಬಿಜೆಪಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ ಅವರು ಲೋಕಸಭೆ ಪ್ರತಿಪಕ್ಷ ನಾಯಕರಾಗಿ ಅಧಿವೇಶನದ ಚೊಚ್ಚಲ ಭಾಷಣದಲ್ಲಿಯೇ ಹಿಂದುಗಳ ವಿರುದ್ಧ ಅಸಹನೆ, ಕಾಂಗ್ರೆಸ್ ನ ಒಡೆದಾಳುವ ನೀತಿ ಅನಾವರಣ ಮಾಡಿದ್ದಾರೆ. ಸಂಸತ್ ಘನತೆಗೆ ಕುಂದು ತರುವ ಜತೆಗೆ ದುರುಪಯೋಗ ಮಾಡಿಕೊಂಡಿರುವುದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಿಜೆಪಿ ಬಗ್ಗೆ ಟೀಕೆ, ಆರೋಪ ಮಾಡಿದರೆ ರಾಜಕೀಯವಾಗಿ ಉತ್ತರಿಸಲು, ಎದುರಿಸಲು ಪಕ್ಷ ಸಮರ್ಥವಾಗಿದೆ. ಆದರೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಬಿಜೆಪಿ ಅಪಾರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಿಂದುಗಳಿಗೆ ಅಪಮಾನಿಸುವ ಚಾಳಿ ಮುಂದುವರಿಸಿ ನಂತರ ತಮ್ಮ ಮಾತು ತಿರುಚಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.

ಎನ್ ಡಿಎ ಸತತವಾಗಿ ಮೂರನೆ ಬಾರಿಗೆ ಅಧಿಕಾರಕ್ಕೆ ಬಂದು ದಾಖಲೆ ಸೃಷ್ಟಿಸಿದೆ, ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ಸತತ ಮೂರನೆ ಬಾರಿ ವಿಫಲರಾಗಿದ್ದಾರೆ. ವಿರೋಧಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಮೊದಲ ಭಾಷಣವು ಸುಳ್ಳು, ನಿರಾಶೆ ಹಾಗೂ ಆಧಾರರಹಿತ ಆರೋಪದಿಂದ ಕೂಡಿತ್ತು, ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ತಿರುಗಾಡಿ ಈಗ ವಿರೋಧ ಪಕ್ಷದ ನಾಯಕರಾಗಿ ಅದೇ ಚಾಳಿ ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದ ನಾಯಕ ಸ್ಥಾನದ ಘನತೆಗೂ ಧಕ್ಕೆ ತಂದಿದ್ದಾರೆ. ಹಿಂದೂಗಳು ಹಿಂಸಾಚಾರ ಹಾಗೂ ಧ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ,
ಹಿಂದೂಗಳ ತೇಜೋವಧೆ ಮಾಡಿದ್ದಾರೆ.ಅಗ್ನಿವೀರ್,ರೈತರು, ಅಯೋಧ್ಯೆ, ಮೈಕ್ರೋಫೋನ್ ವಿಚಾರದಲ್ಲಿಯೂ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ.ಅನೇಕ ವಿಚಾರಗಳಲ್ಲಿ ಸುಳ್ಳು ಪ್ರಚಾರ ಮಾಡಿದ್ದು ಅಕ್ಷಮ್ಯ ಅಪರಾಧ, ಹಾಗಾಗಿ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸುಳ್ಳು ಹೇಳಿ ಓಡಿಹೋಗುವಂತಿಲ್ಲ, ಈ ಹಿಂದೆ ವಿದೇಶದಲ್ಲಿ ಭಾಷಣ ಮಾಡುತ್ತಾ ಭಾರತದಲ್ಲಿ ಪ್ರಜಾಭುತ್ವವಿಲ್ಲ ಎಂದಿದ್ದರು ಈಗ ಸದನದಲ್ಲೇ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಮನಸ್ಸೋ ಇಚ್ಚೆ ಮಾತನಾಡಲು ಸದನ ದುರ್ಬಳಕೆ ಮಾಡಿಕೊಂಡಿದ್ದು ಖಂಡನೀಯ,

ಸಿಖ್ ಹತ್ಯಾಕಾಂಡಕ್ಕೆ ಕಾಂಗ್ರೆಸ್ ಕಾರಣ, ತುರ್ತು ಪರಿಸ್ಥಿತಿಗೆ ಕಾರಣ ಕಾಂಗ್ರೆಸ್ ಪಕ್ಷ ಇಂತಹ ಕಾಂಗ್ರೆಸ್ ದೇಶವನ್ನು ಉದ್ದಾರ ಮಾಡುತ್ತೇವೆ ಎಂದು ಏನೇನೊ ಭರವಸೆ ನೀಡಿ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ.
ಪ್ರತಿಪಕ್ಷ ನಾಯಕರಾಗಿ ಹಿಂದೂಗಳ ತೇಜೋವಧೆ ಸರಿಯಲ್ಲ,2010 ರಲ್ಲಿಯೇ ಚಿದಂಬರಂ ಹಿಂದೂಗಳು ಭಯೋತ್ಪಾದಕರು ಎಂದಿದ್ದರು,2013 ರಲ್ಲಿ ಶಿಂಧೆಯೂ ಹೇಳಿದ್ದರು,2021 ರಲ್ಲಿ ರಾಹುಲ್ ಗಾಂಧಿಯವರೂ ಉದ್ಘಟತನದ ಹೇಳಿಕೆ ನೀಡಿದ್ದರು, ರಾಜ್ಯದಲ್ಲಿಯೂ ಸತೀಶ್ ಜಾರಕಿಹೊಳಿ ಹಿಂದೂಪದವನ್ನು ಅವಹೇಳನಕಾರಿಯಾಗಿ ಬಳಸಿದ್ದರು ಎಂದು ಟೀಕಿಸಿದರು.
ಅಗ್ನಿವೀರರು ದುರ್ಮರಣ ಹೊಂದಿದರೆ ಪರಿಹಾರ ನೀಡಲ್ಲ ಎನ್ನುವ ಸುಳ್ಳು ಹೇಳಿಕೆ ರಾಹುಲ್ ಗಾಂಧಿ ನೀಡಿದ್ದಾರೆ, ಅಯೋಧ್ಯೆ ರಾಮಂ ಮದಿರ ನಿರ್ಮಾಣದ ವೇಳೆ ಸ್ಥಳೀಯರಿಗೆ ಪರಿಹಾರ ನೀಡಿಲ್ಲ ಎನ್ನುವ ಸುಳ್ಳು ಆರೋಪ ಮಾಡಿದ್ದಾರೆ,ಆದರೆ 4215 ಮಳಿಗೆಗಳ ಸ್ಥಳಾಂತರಕ್ಕೆ ಪರಿಹಾರ ನೀಡಿದೆ.

ರೈತರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಸುಳ್ಳು ಹೇಳಿದ್ದರು, ವಿರೋಧ ಪಕ್ಷದ ಸ್ಥಾನ ಮೊದಲ ಬಾರಿಗೆ ಪಡೆದಿರುವ ರಾಹುಲ್ ಗಾಂಧಿ ಈ ರೀತಿ ನಡೆದುಕೊಳ್ಳುತ್ತಿರುವುದು ಅಕ್ಷಮ್ಯ, ಸ್ಪೀಕರ್ ಬಗ್ಗೆಯೂ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಹಿಂದೂಗಳ ತೇಜೋವಧೆ ಮಾಡಿದ್ದಾರೆ ಹಾಗಾಗಿ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯವನ್ನು ಪುನರುಚ್ಚರಿಸಿದರು.

ಸದನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ ಹೇಳಿಕೊಟ್ಟರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಬರಲಿದೆ. ಇನ್ನು ಮುಂದಾದರೂ ಹುಡುಗಾಟ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ರಾಹುಲ್ ಗಾಂಧಿ ಕ್ಷಮೆ ಕೇಳಲೇಬೇಕು, ಅವರು ಓಡಿಹೋಗಲು ನಾವು ಬಿಡಲ್ಲ, ಕ್ಷಮೆ ಕೇಳುವ ಅನಿವಾರ್ಯತೆ ಸೃಷ್ಟಿಸುತ್ತೇವೆ ಅಲ್ಲಿಯವರೆಗೂ ಬಿಡಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

Tags:

error: Content is protected !!