ಹೆಚ್ಚುತ್ತಿರುವ ಡೆಂಗ್ಯು ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ನಗರದ ವಿವಿಧೆಡೆ ಫಾಗಿಂಗ್ ಮಷೀನ್ ಕೊಡುಗೆಯಾಗಿ ನೀಡಿ ಮುಂಜಾಗೃತಾ ಕ್ರಮ ವಹಿಸಲಾಗುತ್ತಿದೆ.
ರಾಜ್ಯದ ಬೆಳಗಾವಿ ಜಿಲ್ಲೆ ಸೇರಿ ವಿವಿಧೆಡೆ ಡೆಂಗ್ಯು ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಯುವನಾಯಕ ರಾಹುಲ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿಯ ವಿವಿಧ ಭಾಗಗಳಲ್ಲಿ ಮುಂಜಾಗೃತೆ ಕ್ರಮ ವಹಿಸಲಾಗುತ್ತಿದೆ. ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಅವಶ್ಯಕವಾದ ಫಾಗಿಂಗ್ ಮಷೀನ್ ಮತ್ತು ಹುಲ್ಲು ಕತ್ತರಿಸುವ ಮಷೀನ್ ಕೊಡುಗೆಯಾಗಿ ನೀಡಲಾಗುತ್ತಿದೆ.
ಶ್ರೀನಗರ ಮತ್ತು ಮಹಾಂತೇಶ ನಗರ ಭಾಗದಲ್ಲಿ ಮಾಜಿ ನಗರಸೇವಕ ದಿನೇಶ ನಾಶಿಪುಡಿ, ಅರುಣ ಢೇರೆ, ಶ್ರೀ ನಗರ ಸಾಯಿಮಂದಿರ, ಆಂಜನೇಯ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಳೆಯನ್ನು ಲೆಕ್ಕಿಸದೇ ಫಾಗಿಂಗ್ ಕಾರ್ಯ ಮಾಡಲಾಗುತ್ತಿದೆ.
ಈ ವೇಳೆ ಜನರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಿ, ತಮ್ಮ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕೆಂದು ಮಾಜಿ ನಗರಸೇವಕ ದಿನೇಶ ನಾಶಿಪುಡಿ ಮನವಿ ಮಾಡಿದರು.