ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದ ಸುಕ್ಷೇತ್ರ ಪಂಢರಪುರ ವಿಠ್ಠಲ ದೇವಸ್ಥಾನದಲ್ಲಿ ನಡೆಯುವ ಆಷಾಢ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳಲು ಬಸವನಾಡು ವಿಜಯಪುರ ನಗರ ಸೇರಿದಂತೆ ಹಲವು ತಾಲ್ಲೂಕಿನ ಗ್ರಾಮಗಳ ಭಕ್ತರು ದಿಂಡಿ ಪಾದಯಾತ್ರೆಯ ಮೂಲಕ ಪ್ರಯಾಣ ಕೈಗೊಂಡಿದ್ದಾರೆ.ಜಿಲ್ಲೆಯ ಝಳಕಿ, ಚಡಚಣ ಮಾರ್ಗವಾಗಿ ಹೊರಡುವ ಪಾದಯಾತ್ರಿಕರಿಗೆ ಅಲ್ಲಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರತಿ ದಿನ ದಿಂಡಿ ಯಾತ್ರೆಯ ಪಾದಯಾತ್ರಿಕರು ಅಲ್ಪ ವಿಶ್ರಾಂತಿಯ ನಂತರ ಪ್ರಯಾಣ ಆರಂಭಿಸುವರು.
ಹಲವು ವಾರಿಕರು ಹತ್ತಾರು ವರ್ಷಗಳಿಂದ ಪಾದಯಾತ್ರೆ ಕೈಗೊಂಡು ಆಷಾಢ ಮಾಸದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ಇಂದು ಪಂಡರಪುರ ತಲುಪಲಿದ್ದಾರೆ. ದಿಂಡಿ ಪಾದಯಾತ್ರೆಯುದ್ದಕ್ಕೂ ಪಂಢರಪುರ ವಿಠ್ಠಲನ ನಾಮಸ್ಮರಣೆ ಮಾಡುತ್ತಾ ಪಾದಯಾತ್ರೆ ಮಾಡುತ್ತಾ ಸಾಗುತ್ತಾರೆ. ಮಳೆ ಗಾಳಿ ಚಳಿ ಎನ್ನದೆ ಸಾಗುತ್ತಾರೆ.