ಚಿಕ್ಕೋಡಿ: ಲೋಕೋಪಯೋಗಿ ಇಲಾಖೆಯಿಂದ ಸುಮಾರು 1.50 ಕೋಟಿ ವೆಚ್ಚದಲ್ಲಿ ಸರ್ಕಾರಿ ನೌಕರರ ಭವನದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಚಿಕ್ಕೋಡಿಯಲ್ಲಿ ಹೊಸ ಸರ್ಕಾರಿ ನೌಕರರ ಭವನ ನಿರ್ಮಾಣವಾಗಬೇಕೆಂದು ಬಹುದಿನಗಳ ಕನಸಾಗಿತ್ತು.ಸದ್ಯ ಈ ಕಾಮಗಾರಿಗೆ ಇವತ್ತು ಚಾಲನೆಯನ್ನು ನೀಡಲಾಗಿದೆ. ಈ ಕಟ್ಟಡ ಕಾಮಗಾರಿಗೆ ಹೆಚ್ಚುವರಿ ಯಾಗಿ 1.50 ಕೋಟಿ ರೂಪಾಯಿ ನೀಡಲಾಗುವುದು ಎಂದರು. ಸರ್ಕಾರಿ ನೌಕರರ ಹಿತ ದೃಷ್ಟಿಯಿಂದ ಒಳ್ಳೆಯ ಸುಸ್ಸರ್ಜಿತ ನೌಕರರ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಅದಲ್ಲದೆ ಚಿಕ್ಕೋಡಿ ಕೋರ್ಟ್ ನಿರ್ಮಾಣಕ್ಕೆ 1.50 ಕೋಟಿ ಅನುದಾನ ನೀಡಲಾಗಿದೆ ಹಾಗೂ ನಿಪ್ಪಾಣಿಯಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕಾಗಿ 18 ಲಕ್ಷವನ್ನು ಅನುದಾನ ಬಿಡುಗಡೆ ಮಾಡಲಾಗಿದೆ. ಅಗಸ್ಟ್ 15ಕ್ಕೆ ಚಿಕ್ಕೋಡಿಯ ತಾಯಿ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗುವುದು. ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಸದಾಕಾಲ ಜನರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಬಳಿಕ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಚಿಕ್ಕೋಡಿಯಲ್ಲಿ ಜಿಲ್ಲಾ ದೃಷ್ಟಿಕೋನದಿಂದ ಸರ್ಕಾರಿ ನೌಕರರ ಭವನ ನಿರ್ಮಾಣವಾಗುತ್ತಿರುವುದು ಸಂತಸ ವಿಷಯ. ಸರ್ಕಾರಿ ನೌಕರರ ಅನುಕೂಲಕ್ಕೆ ತಕ್ಕಹಾಗೆ ಭವನವನ್ನು ನಿರ್ಮಾಣ ಮಾಡಲಾಗುವುದು ಅದಲ್ಲದೆ ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅನುದಾನದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ರಾಮಾ ಮಾನೆ,ಶ್ಯಾಮ ರೇವಡೆ,ಪ್ರಭಾಕರ ಕೋರೆ,ರಾಹುಲ ಜಾರಕಿಹೊಳಿ,ಎಸಿ ಸುಭಾಶ ಸಂಪಗಾವಿ,ತಹಶಿಲ್ದಾರ ಪಿ,ಚಿದಬರಂ,ಅಣ್ಣಾಸಾಹೇಬ ಹವಲೆ,ಉತ್ತಮ ಪಾಟೀಲ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.