ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣ ವಕೀಲರ ಸುಪುತ್ರಿಯರನ್ನು ಮರಾಠಿ ಭಾಷಿಕ ವಕೀಲರ ಸಂಘಟನೆಯ ವತಿಯಿಂದ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

ಬೆಳಗಾವಿನಗರ ಚವ್ಹಾಟಗಲ್ಲಿಯಲ್ಲಿರುವ ಶ್ರೀ ಜಾಲಗಾರ ಮಾರುತಿ ಮಂಗಲ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 99.58 ರಷ್ಟು ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತನೀಷ್ಕಾ ನಾವಗೇಕರ ಮತ್ತು ಶೇ. 98.5 ರಷ್ಟು ಅಂಕ ಗಳಿಸಿದ ಐಶ್ವರ್ಯಾ ಬಾಂದಿವಡೇಕರ ಅವರನ್ನು ಸತ್ಕರಿಸಲಾಯಿತು. ಈ ವೇಳೆ ವಕೀಲರಾದ ಅನೀಲ ಸಾಂಬರೇಕರ, ಶಂಕರ ನಾವಗೇಕರ, ಎ.ಎಂ.ಪಾಟೀಲ, ವಿಜಯಕುಮಾರ ಹೊನಮಣಿ, ಗಜಾನನ ಪಾಟೀಲ, ಸುಧೀರ ಪಾಟೀಲ, ಪ್ರಫುಲ್ಲ ಟಪಾಲವಾಲೆ ಇನ್ನುಳಿದವರು ಭಾಗಿಯಾಗಿದ್ಧರು.