DENGUE

ಧಾರವಾಡದಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿ….ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 5 ತಿಂಗಳ ಮಗು ಸಾವು….

Share

ಧಾರವಾಡದಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿಯಾಗಿದೆ. ಇತ್ತೀಚೆಗೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಬಾಲಕಿಯೋರ್ವಳು ಶಂಕಿತ ಡೆಂಘೀ ಜ್ವರದಿಂದಾಗಿ ಸಾವನಪ್ಪಿದ್ದಳು. ಅದಾದ ಬಳಿಕ ಧಾರವಾಡದಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ 5 ತಿಂಗಳ ಹೆಣ್ಣು ಮಗು ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾಗಿದೆ.

 

ಧಾರವಾಡದಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್ ಆಗಿರುವ ಗೋಪಾಲ ಲಮಾಣಿ ಎಂಬುವವರ ಐದು ತಿಂಗಳ ಪುತ್ರಿ ಆರಾಧ್ಯ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದಳು. ಇದರಿಂದ ಆರಾಧ್ಯಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಆರಾಧ್ಯ ಅಸುನೀಗಿದ್ದಾಳೆ. ಗೋಪಾಲ ಲಮಾಣಿ ಅವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರಾಗಿದ್ದು, ದಾರವಾಡ ಜಿಲ್ಲೆಯಲ್ಲಿ ಶಂಕಿತ ಡೆಂಘ್ಯೂ ಜ್ವರಕ್ಕೆ ಎರಡನೇ ಮಗು ಬಲಿಯಾದಂರಾಗಿದೆ‌.

Tags:

error: Content is protected !!