Agriculture

ಶಿವಸಾಗರ ಸಕ್ಕರೆ ಕಾರ್ಖಾನೆ ವಿರುದ್ಧ ಅಹೋರಾತ್ರಿ ಧರಣಿ ಬಸವರಾಜ ಕರಿಗಾರ

Share

ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯ ರೈತರು ಹಾಗೂ ಕಾರ್ಮಿಕರು ಮತ್ತು 75000 ಸಾವಿರ ಜನರ ಶೇರ ಹಣವನ್ನು ಮರಳಿ ನೀಡುವವರೆಗೆ ಕಾರ್ಖಾನೆಯ ವಿರುದ್ಧ ಬೃಹತ ಪ್ರತಿಭಟನೆ ಮಾಡುವುದಾಗಿ ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು . ರಾಮದುರ್ಗ ತಾಲೂಕ ಉದಪುಡಿ ಗ್ರಾಮದಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯು NCLT ಯಲ್ಲಿ ಹರಾಜ ಪ್ರಕ್ರಿಯೆಯಲ್ಲಿ ರೈತರ ಕಬ್ಬಿನ ಬಾಕಿ ಬಿಲ್ಲು ನೀಡುವುದನ್ನು ಮತ್ತು 75 ಸಾವಿರ ಶೇರುದಾರರ ಹಣ ನೀಡುವದನ್ನು ಮರಳಿ ನೀಡುವುದನ್ನು ಕಾರ್ಖಾನೆಯ ಅಧಿಕಾರಿಗಳು ಮರೆತಿದ್ದಾರೆ. ಇದರಿಂದ ಕಬ್ಬಿನ ಬಾಕಿ ಬಿಲ್ಲ ಇರುವ ರೈತರು ಮತ್ತು 75 ಸಾವಿರ ಶೇರುದಾರರಿಗೆ ಬಹಳ ಅನ್ಯಾಯವಾಗುತ್ತಿದೆ.

ಕಾರ್ಖಾನೆಯ ವಿರುದ್ದ ರೈತರ ಕಬ್ಬಿನ ಬಿಲ್ಲು ಹಾಗೂ 75000 ಸಾವಿರ ಶೇರುದಾರ ಹಣ ಮತ್ತು ಇಲ್ಲಿಯವರೆಗೆ ಬ್ಯಾಂಕಿನ ಬಡ್ಡಿ ಸೇರಿಸಿ ಮರಳಿ ನೀಡುವವರೆಗೆ ಹಾಗೂ ಕಾರ್ಮಿಕರ ಬಾಕಿ ಹಣವನ್ನು ನೀಡುವವರೆಗೆ ಶಿವಸಾಗರ ಸಕ್ಕರೆ ಮುಂಭಾಗದಲ್ಲಿ ಬರುವ 04 ರಂದು ಬೆಳಿಗ್ಗೆ 10:00 ಗಂಟೆಯಿಂದ ನ್ಯಾಯ ಸಿಗುವರೆಗೂ ಅಹೊರಾತ್ರಿ ಧರಣಿ ಮಾಡುವ ನಿರ್ದಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸದಾಶಿವ ಮಾತನವರ , ಮಾಲಿಯಪ್ಪ ದಬಗಲ್, ಮಂಜುನಾಥ ಶಲ್ಲೆನವರ , ಹಾಗೂ ಇತರರು ಉಪಸ್ಥಿತರಿದ್ದರು.

Tags:

error: Content is protected !!