Kagawad

ಚಾತುರ್ಮಾಸದಲ್ಲಿ ಭಾಗಿಯಾಗಲು ಏಕಕಾಲಕ್ಕೆ ನಾಂದಣಿ ಗ್ರಾಮಕ್ಕಾಗಮಿಸಿದ 29 ಜೈನ ಮುನಿಗಳು

Share

ವಿಶ್ವ ಶಾಂತಿಗಾಗಿ ಜೈನ ಸಮಾಜದ ಮುನಿ ಮಹಾರಾಜರು ನಾಂದನಿ ಜೈನ ಮಠದಲ್ಲಿ ನಾಳೆ ಭಾನುವಾರದಂದು ನಡೆಯಲಿರುವ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗಿಯಾಲು ಏಕಕಾಲಕ್ಕೆ 29 ಜೈನ ಮುನಿ ಮಹಾರಾಜರು ನಾಂದನಿ ಗ್ರಾಮಕ್ಕೆ ಆಗಮಿಸಿದರು.

ಕಾಗವಾಡ ತಾಲೂಕಿನ ನಾಂದನಿ ಜೈನ ಮಠದ ಭಟ್ಟಾರಕ ಮಹಾರಾಜರಾದ ಜೀನಸೇನ ಭಟ್ಟಾರಕರ ಮಹಾರಾಜರು ಮತ್ತು ಅಧ್ಯಾತ್ಮಯೋಗಿ ಶೀರೋಮಣಿ ಆಚಾರ್ಯ ವಿಶ್ವದಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗಿಯಾಲು ಏಕಕಾಲಕ್ಕೆ 29 ಜೈನ ಮುನಿ ಮಹಾರಾಜರು ನಾಂದನಿ ಗ್ರಾಮಕ್ಕೆ ಆಗಮಿಸಿದರು. ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ನಾಂದನಿ ಗ್ರಾಮದ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ 700 ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳ ನೇತೃತ್ವವನ್ನು ನಾಂದನಿ ಜೈನ ಮಠ ಕೈಗೊಳ್ಳಲಿದೆ. ಇದರಲ್ಲಿ ಶ್ರಾವಕ ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಿಂದ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ನಾಳೆ ಭಾನುವಾರ ನಾಂದನಿ ಜೈನಮಠದಲ್ಲಿ ನಡೆಯಲಿರುವ ಚಾತುರ್ಮಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಭಾಗಿಯಾಗಲಿದ್ದಾರೆ.

Tags:

error: Content is protected !!