ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಮಳೆ ಮುಂದುವರೆದ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂ ಹೊರ ಹರಿವು ಹೆಚ್ಚಳಗೊಂಡಿದೆ
ಬೆಳಿಗ್ಗೆ 1.25 ಲಕ್ಷ ಕ್ಯೂಸೆಕ್ ಇದ್ದ ಹೊರ ಹರಿವು ಈಗ ಮಧ್ಯಾಹ್ನ 2.30ಕ್ಕೆ 1.50 ಲಕ್ಷ ಕ್ಯೂಸೆಕ್ಗೆ ಡ್ಯಾಂ ಅಧಿಕಾರಿಗಳು ಹೊರ ಹರಿವು ಹೆಚ್ಚಳ ಮಾಡಲಿದ್ದಾರೆ. ನಾರಾಯಣಪುರ ಡ್ಯಾಂಗೆ ಅಲರ್ಟ್ ಮೆಸೆಜ್ ರವಾನಿಸಿರುವ ಆಲಮಟ್ಟಿ ಡ್ಯಾಂ ಅಧಿಕಾರಿಗಳು, ನಾರಾಯಣಪುರ ಡ್ಯಾಂ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಮೆಸೆಜ್ ರವಾನಿಸಿದ್ದಾರೆ. ಯಾದಗಿರಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾನದಿ ಪಾತ್ರಕ್ಕೆ ಜಾನುವಾರು ಬಿಡದಂತೆ ಎಚ್ಚರಿಕೆ, ಸಾರ್ವಜನಿಕರು ನದಿ ದಂಡೆಗೆ ತೆರಳದಂತೆ ಸೂಚಿಸಿದ್ದಾರೆ.