ನಿಪ್ಪಾಣಿ ತಾಲ್ಲೂಕಿನಲ್ಲಿ ನಿನ್ನೆಯಿಂದ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ,

ನಿಪ್ಪಾಣಿ ನಗರ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಭರ್ಜರಿ ಜೋರು ಮಳೆ ಸುರಿಯಿತು. ಪರಿಣಾಮ ನಗರದಲ್ಲಿ ಜನಜೀವನ ಕೆಲಕಾಲ ಅಸ್ತವ್ಯಸ್ಥವಾಯಿತು. ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರ ಸ್ವರೂಪ ಪಡೆಯಿತು. ಚರಂಡಿಗಳು ತುಂಬಿ ಹರಿದವು. ರಸ್ತೆ ಹಳ್ಳದಂತೆ ನೀರು ಹರಿಯುತ್ತಿರುವುದು ಕಂಡುಬಂತು. ತರಕಾರಿ ಹಾಗೂ ಹಣ್ಣು ಮಾರುಕಟ್ಟೆಯಲ್ಲಿ ಚರಂಡಿ ನೀರು ಹೊಳೆಯಂತೆ ಹರಿದ ಪರಿಣಾಮ ತರಕಾರಿ, ಹಣ್ಣುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುಂತಾಗಿದೆ. ಚರಂಡಿಗಳು ಬ್ಲಾಕ್ ಆಗಿದ್ದರಿಂದ ಕೊಳಚೆ ನೀರು ಸಂಪೂರ್ಣ ಮಾರುಕಟ್ಟೆ ತುಂಬ ತುಂಬಿಕೊಂಡಿದೆ. ಇದರಿಂದ ನೆಲದ ಮೇಲೆ ಹಚ್ಚಿದ ತರಕಾರಿ, ಹಣ್ಣುಗಳು ನೀರು ಪಾಲಾದವು.
