ಬೆಳಗಾವಿ ನಗರದ ಪ್ರಮುಖ ರಸ್ತೆಗಳೆಲ್ಲ ಧೂಳು, ಮಣ್ಣಿನಿಂದ ಆವೃತ್ತವಾಗಿ ಸ್ಮಾರ್ಟ್ ಬದಲಾಗಿ ಡಸ್ಟ್ ಸಿಟಿಯಾಗಿ ಜನರ ಆಕ್ರೋಶಕ್ಕೆ ತುತ್ತಾಗಿದೆ ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸ್ಮಾರ್ಟ್ ಸಿಟಿ ಬೆಳಗಾವಿಯ ಪ್ರಮುಖ ರಸ್ತೆಗಳೆಲ್ಲ ಧೂಳು, ಮಣ್ಣಿನಿಂದ ಆವೃತ್ತವಾಗಿ ಸ್ಮಾರ್ಟ್ ಬದಲಾಗಿ ಡಸ್ಟ್ ಸಿಟಿಯಾಗಿದೆ , ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಜನರಿಗೆ ಸಮಸ್ಯೆಯಾಗುತ್ತೀದ್ದೆ , ಬೆಳಗಾವಿ ಪ್ರಮುಖವಾದ ಸ್ಥಳವಾದ ಎಪಿಎಂಸಿ ರಸ್ತೆಯಲ್ಲಿ ಜನರಿಗೆ ಕುಳಿತುಕೊಳ್ಳಲು ಸರಿಯಾಗಿ ಬಸ್ ನಿಲ್ದಾಣ ವ್ಯವಸ್ಥೆವಿಲ್ಲ , ರಸ್ತೆಯೇ ರಸ್ತೆಯಲ್ಲಿ ಎರಡು ಬದಿಯಲ್ಲಿ, ನೀರು ಸರಾಗವಾಗಿ ಡ್ರೈನ್ ಗೆ ಹರಿಯದಂತಾಗಿದೆ. ಎಪಿಎಂಸಿ ಯಾರ್ಡ್ ಈ ದುರ್ನಾತ ಬೀರುವ ರಸ್ತೆಯಲ್ಲಿ ಗ್ರಾಹಕರು ಸಂಚರಿಸಲು ಅಸಹ್ಯ ಪಡುತ್ತೀದ್ದಾರೆ .

ರಸ್ತೆ ಅಭಿವೃದ್ಧಿ ನೆಪದಲ್ಲಿ ಪುಟ್ ಪಾತ್ ವಿಸ್ತರಿಸಿ ಸ್ಲ್ಯಾಬ್ಗ ಳನ್ನು ಅಳವಡಿಸಿ ,ಕಳೆಪೆ ಸ್ಮಾಟ್ ಸ್ಮಾಟಿ ಸಿಟಿ ಕಾಮಗಾರಿಯಿಂದ ಪುಟ್ ಪಾತ್ ರಸ್ತೆಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ , ರಾತ್ರಿ ವೇಳೆ ಹಾಗೂ ಅವಸರದ ವೇಳೆಯಲ್ಲಿ ಜನರು ನೋಡಿದೆ ಕಂದಕ್ಕೆ ಬಿದ್ದರೆ ದೊಡ್ಡ ಅನಾಹುತ್ತ ಆಗುತ್ತೇದೆ ,ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಕಾರಣ ಕೊಳಚೆ ನೀರು ಹರಿಯುತ್ತಿದೆ.ಪಾಲಿಕೆ ಯಿಂದ ಸ್ವಚ್ಛ ಮಾಡದ ಕಾರಣ ಗಿಡ ಗಂಟಿ ಗಳು ಬೆಳೆದು, ಕಸದ ರಾಶಿ ತುಂಬಿ ತುಳುಕುತ್ತೀದ್ದೆ

ಹೂ ಕುಂಡಗಳನ್ನು ಫುಟ್ ಪಾತ್ ಸೇರಿದಂತೆ ಕೆಲವೆಡೆ ಅಳವಡಿಸಲಾಗಿತ್ತು ಹೂವು ಕುಂಡಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿತ್ತು. ಇದು ಸಾಧ್ಯವಾಗದ ಕಾರಣ ಯೋಜನೆ ಹಾಳು ಬಿದ್ದಿದೆ , ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆಯ ಸದಸ್ಯರು ನಡುವೆ ಹೊಂದಾಣಿಕೆ ಕಂಡು ಬರುತ್ತೀಲ್ಲ ಎನ್ನಬಹುದು.
ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಸ್ಮಾರ್ಟಿ ಸಿಟಿ ಅಧಿಕಾರಿಗಳು ಎಚ್ಚೆತುಕೊಂಡು ಕೆಲಸ ಮಾಡಬೇಕು ಹಾಗೂ ಕುಂದಾನಗರಿಯು ಕಸದ ನಗರಿಯಾಗುವ ಬದಲು ಸ್ವಚ್ಛ ನಗರಿಯಾಗ ಬೇಕೆಂದು ನಮ್ಮ ಆಸೆಯೆಯಾಗಿದೆ .
