award

ಉಗಾರ ಲಾಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮಾಜಿ ಶಾಸಕ ಮೋಹನರಾವ ಶಹಾ ಅವರ ಸುಪುತ್ರ ರಾಹುಲ್ ಶಹಾ

Share

Former MLA Mohan Rao Shah’s son Rahul Shah is the President of Ugara Lions Club

ಉಗಾರ್ ಲೈನ್ಸ್ ಕ್ಲಬ್ ಶಾಖೆಯ ಸನ್ 2024-25 ವರ್ಷಕ್ಕಾಗಿ ಮಾಜಿ ಶಾಸಕ ಮೋಹನರಾವ್ ಶಹಾ ಅವರ ಸುಪುತ್ರ ರಾಹುಲ್ ಶಹಾ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಬುಧವಾರ ಸಂಜೆ ಉಗಾರದಲ್ಲಿ ಸನ್ 2024-25ನೆ ವರ್ಷಕ್ಕಾಗಿ ಲೈನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೋವಾ ಮತ್ತು ಕರ್ನಾಟಕ ರಾಜ್ಯದ ಲೈನ್ಸ್ ಕ್ಲಬ್ 317-ಬಿ ವಿಭಾಗದ ಮಾಜಿ ಗವರ್ನರ್ ಯುಲಾರಿಕೊ ರಾಡ್ರಿಗ್ಯೂಜ್ ಇವರಿಂದ ಪದಾಧಿಕಾರಿಗಳಿಗೆ ಪ್ರಮಾಣವಚನ ನೀಡಿ ಆಯ್ಕೆ ಮಾಡಿದರು.

ಉಗಾರ ಸಕ್ಕರೆ ಕಾರ್ಖಾನೆಯ ಉದ್ಯಮಿ ರಾಜಾಭಾವು ಶಿರಗಾಂವಕರ ಇವರ ನೇತೃತ್ವದಲ್ಲಿ ಲೈನ್ಸ್ ಕ್ಲಬ್ ಶಾಖೆಯೂ ಸನ್ 1997ರಲ್ಲಿ ಪ್ರಾರಂಭಿಸಿದ್ದು ಉಗಾರ ಲೈನ್ಸ್ ಕ್ಲಬ್ ಸದಸ್ಯರು ಉತ್ತಮ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಪ್ರತಿವರ್ಷ ಲೈನ್ಸ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಜನರಿಗೆ ಮಾರ್ಗದರ್ಶನ, ಸಸಿಗಳು ನಟ್ಟುವುದು, ಸಮಸ್ಯೆಗಳಲ್ಲಿರುವ ಕುಟುಂಬಗಳಿಗೆ ಬೇರೆ-ಬೇರೆ ರೀತಿಯಿಂದ ನೆರವಾಗುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಜಿಲ್ಲೆಯಲ್ಲಿ ಅತ್ಯುತ್ತಮ ಶಾಖೆಯಾಗಿದೆಯೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುಲಾರಿಕೊ ರಾಡ್ರಿಗ್ಯೂಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಲೈನ್ಸ್ ಕ್ಲಬಿನ ಅಧ್ಯಕ್ಷರಾಗಿ ರಾಹುಲ್ ಶಹಾ, ಕಾರ್ಯದರ್ಶಿಗಳಾಗಿ ಡಾ. ಮೋಹನ್ ಕಟಗೇರಿ, ಖಜಾಂಚಿಗಳಾಗಿ ಪ್ರಸಾದ ಕಾಗೆ, ಉಪಾಧ್ಯಕ್ಷ -1 ಪಾಯಪ್ಪಾ ಕೂಡವಕ್ಕಲಗಿ, ಉಪಾಧ್ಯಕ್ಷ- 2 ರಾಮಚಂದ್ರ ಕಿಲ್ಲೆದಾರ್, ಹಿರಿಯ ಮಾರ್ಗದರ್ಶಕರಾಗಿ ಸುಭಾಷ್ ಹೆಬ್ಬಾಳೆ, ಡಾ. ಬಿ.ಎ.ಪಾಟೀಲ, ನಿಕಟಪೂರ್ವ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಆನಂದ ಕುಂಬಾರ, ಜಯೇಂದ್ರ ಶೆಟ್ಟಿ, ಎಸ್.ವಿ.ಭಟ್, ರಾಜೇಂದ್ರ ಪೋತದಾರ್ ಮತ್ತು ಸಚಿನ್ ಪೋತದಾರ್ ಇವರೊಂದಿಗೆ ಹಿರಿಯ ಸದಸ್ಯರನ್ನು ಸಂಚಾಲಕರಾಗಿ ಆಯ್ಕೆಮಾಡಿ ಪ್ರಮಾಣ ವಚನ ಬೋಧಿಸಿದರು.

ನಿಕಟಪೂರ್ವ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಇವರು ಕಳೆದ ವರ್ಷ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಸಹಕಾರ ನೀಡಿರುವ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಗಾರ ಸಕ್ಕರೆ ಕಾರ್ಖಾನೆಯ ಸಂಚಾಲಕ ದಿಪಚಂದ ಶಹಾ, ಸುನಿಲ್ ನಾಯ್ಕ್, ಶಶಿಕಾಂತ ಜೋಶಿ, ಮನೀಷ ಶಹಾ, ಡಾ. ಎಚ್.ಎನ್.ಭಟ್, ಸೇರಿದಂತೆ ಎಲ್ಲಾ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಕ್ಲಬ್ಬಿನ ಸದಸ್ಯ ಬಾಳಗೌಡ ಕಾಗೆ ಸ್ವಾಗತಿಸಿದರು, ರಾಮಚಂದ್ರ ಕಿಲ್ಲೆದಾರ ನಿರೂಪಸಿದರು, ಭೂಪಾಲ ಚೌಗೂಲೆ ವಂದಿಸಿದರು.

ಕಾರ್ಯಕ್ರಮದಲ್ಲಿ ಕಳೆದ 96 ವಾರಗಳಿಂದ ಕೃಷ್ಣಾ ನದಿ ತೀರದ ಪರಿಸರ ಕಲುಷಿತವಾಗದಂತೆ ಸ್ವಚ್ಛತೆಯಲ್ಲಿ ಮುಂದಾಗಿರುವ ನಿಸ್ವಾರ್ಥವಾಗಿ. ಸಂಜಯ ಶಿಂಧೆ, ಚಿಂತಾಮಣಿ ಜೋಶಿ, ಸುನಿಲ್ ಕಾಂಬಳೆ ಇವರನ್ನು ಸನ್ಮಾನಿಸಲಾಯಿತು.

Tags:

error: Content is protected !!