ಬಸ್ಸಿಗಾಗಿ ಕಾಯುತ್ತಿದ್ದ ಹನ್ನೇರಡಕ್ಕೂ ಹೆಚ್ಚು ಜನರ ಮೇಲೆ ವೇಗವಾಗಿ ಬರುತ್ತೀದ್ದ ಕಾರೊಂದು ಹರಿದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತರಾಗಿದ್ದು, 12 ಜನ ಗಂಭೀರವಾಗಿ ಗಾಯಗೊಂಡ ಘಟನೆ ಗೋಕಾಕ ನಾಕಾ ನಂ 1 ಬಳಿ ನಡೆದಿದೆ.
ಗಂಗವ್ವ ಪಕ್ಕಿರಸ್ವಾಮಿಮಠ (45) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಗೋಕಾಕ ನಾಕಾ ನಂ 1 ಬಳಿ ಹಲವರು ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಆಗ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರ ಮೇಲೆ ಹರಿದಿದೆ ನಂತರ ಎದುರಿನಿಂದ ಬರುವ ಬೈಕ ಸವಾರನಿಗೂ ಡಿಕ್ಕಿ ಹೊಡೆದಿದೆ. ಕೊನೆಗೆ ಎದುರಿಗೆ ಬರುವ ಸಾರಿಗೆ ಬಸ್ ಗೂ ಡಿಕ್ಕಿ ಹೊಡಿದಿದೆ ಈ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇನ್ನುಳಿದ 12 ಜನರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.