Accident

ಆಟೋ ಅಧ್ಯಕ್ಷನ ಮಗ ಆಕಾಶ ಮಠಪತಿ ಕೊಲೆ ಪ್ರಕರಣ 12 ಜನರ ಮೇಲೆ ಎಫ್ ಐ ಆರ್ ದಾಖಲು

Share

ಆಟೋ ಅಧ್ಯಕ್ಷನ ಮಗ ಆಕಾಶ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಜನ ಆರೋಪಿಗಳ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದು. ಸದ್ಯ ಹಲವು ಜನ ಆರೋಪಿಗಳನ್ನು ಠಾಣೆಗೆ ಎತ್ತಾಕಿಕೊಂಡು ಬಂದು ಈಗಾಗಲೇ ವಿಚಾರಣೆಯನ್ನು ಕ್ಷಿಪ್ರಗತಿಯಲ್ಲಿ ನಡೆಸುತ್ತಿದ್ದಾರೆ.

ಕೊಲೆಯಾದ ಆಕಾಶನ ತಂದೆ ಶೇಖರಯ್ಯ ಮಠಪತಿ ನೀಡಿದ ದೂರಿನ ಅನ್ವಯ ಆಕಾಶನ ಹೆಂಡತಿ,ಅತ್ತೆ ಮಾವ ಸೇರಿದಂತೆ ಒಟ್ಟು 12 ಜನ ಆರೋಪಿಗಳ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ IPC 149-302 ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಇನ್ನು ಆಕಾಶ ಹಾಗೂ ಹೆಂಡತಿ ಕಾವ್ಯ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದರು ಆಗಿನಿಂದಲೂ ಆಕಾಶ ಹಾಗೂ ಕಾವ್ಯ ಕುಟುಂಬಗಳ ನಡುವೆ ಅಸಮಾಧಾನವಿದ್ದ ಕಾರಣ,ಹೆಂಡತಿ ಕಾವ್ಯಾ ಕುಮ್ಮಕ್ಕಿನಿಂದಲೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತಾ ಶೇಖರಯ್ಯ ಮಠಪತಿ ಮಾಧ್ಯಮದ ಮುಂದೆ ಆರೋಪವನ್ನು ಮಾಡಿದ್ದರು.
ಸದ್ಯ ಈ ಕೊಲೆಗೆ ಎರಡು ಕುಟುಂಬದಲ್ಲಿನ ಭಿನ್ನಾಭಿಪ್ರಾಯವೇ ಕಾರಣ ಆಗಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೂ ಕೂಡಾ ಪೊಲೀಸರ ಪ್ರಾಮಾಣಿಕ ತನಿಖೆಯಿಂದ ಕೊಲೆ ಮಾಡಿದ್ದು ಯಾರು,ಯಾಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Tags:

error: Content is protected !!