Crime

ಹುಬ್ಬಳ್ಳಿಯಲ್ಲಿ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಮಗನ ಕೊಲೆ

Share

ಉತ್ತರ ಕರ್ನಾಟಕ ಆಟೋ ಚಾಲಕರ ಅಧ್ಯಕ್ಷನ ಮಗ ಅನುಮಾನಸ್ಪ ಸಾವಿನಪ್ಪಿದ್ದು, ಹುಬ್ಬಳ್ಳಿಯಲ್ಲಿ ಮತ್ತೆ ಆತಂಕದ ಛಾಯೆ ಆವರಿಸಿದೆ.. ಸಂಜೆ ಮನೆಯಿಂದ ಸ್ನೇಹಿತರ ಜೊತೆಗೆ ಹೊರಗೆ ಹೋಗಿದ್ದ ಮಗ ಹೆಣವಾಗ ಪತ್ತೆಯಾಗಿದ್ದಾನೆ.. ಮಗನ ಹೆಂಡತಿ ಕುಟುಂಬಸ್ಥರ ಮೇಲೆ ಯುವಕನ ತಂದೆ ಆರೋಪಿದ್ದು, ಸಾವಿನ ಅಸಲಿ ಸತ್ಯ ಹೊರೆ ತರಲು ಖಾಕಿಪಡೆ ಫಿಲ್ಡಿಳಿದಿದೆ..

ಒಂದು ಕಡೆ ಸಾವಿನ ಜಾಡು ಹಿಡಿದು ರಾತ್ರಿ ಕತ್ತಲಲ್ಲಿ ಪೊಲೀಸರ ಹುಡುಕಾಟ..ಮತ್ತೊಂದು ಕಡೆ ಆಸ್ಪತ್ರೆ ಎದುರು ಕುಟುಂಬಸ್ಥರು ಆಕ್ರಂದನ..ಈ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರದಲ್ಲಿ… ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಶೇಖರಯ್ಯ ಮಠಪತಿಯ 30 ವರ್ಷ ಪುತ್ರ ಆಕಾಶ್ ಶನಿವಾರ ಸಂಜೆ ಹುಬ್ಬಳ್ಳಿ ಲೋಹಿಯಾ ನಗರದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕಾಶ್ ಸಾವಿನ ಸುತ್ತ ಅನುಮಾನ ಹುತ್ತ ಹುಟ್ಟಿಕೊಂಡಿದೆ. ಆಕಾಶ್
ಸಂಜೆ ಸ್ನೇಹಿತರ ಜೊತೆಗೆ ಹೊರಗಡೆ ತೆರಳಿದ್ದ ಇದಾದ ಕೆಲ ಹೊತ್ತಿನ ಬಳಿಕ ಆತನ ಸ್ನೇಹಿತರು, ತಂದೆ ಶೇಖರಯ್ಯರಿಗೆ ಕರೆಮಾಡಿ, ಆಕಾಶ್ ಗೆ ತೀವ್ರ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ ಅಂತ ವಿಷಯ ತಿಳಿಸಿದ್ದಾರೆ.. ಗಾಬರಿಯಿಂದ ಸ್ಥಳಕ್ಕೆ ತೆರಳಿ ಶೇಖರಯ್ಯ ಪ್ರಜ್ಞೆ ಇಲ್ಲದ ಮಗನನ್ನು ತಮ್ಮದೆ ಆಟದಲ್ಲಿ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.. ಆದರೆ ಅಷ್ಟೊತ್ತಿಗಾಗಲೇ ಆಕಾಶ್ ಪ್ರಾಣ ಪಕ್ಷಿ ಹಾರಿಹೋಗಿತ್ತು…

ಮೃತ ಆಕಾಶ್ ಕಳೆದ ಆರು ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ತಾನು ಮೆಚ್ಚಿದ ಅನ್ನಪೂರ್ಣ ಎನ್ನುವ ಯುವತಿಯನ್ನು ಅಂರತಜ್ಯಾತಿ ವಿವಾಹವಾಗಿದ್ದ.. ವಿವಾಹ ಬಳಿಕ ಆಕಾಶ್ ಹೆಂಡತಿ ಅನ್ನಪೂರ್ಣ ಮತ್ತು ಆಕೆಯ ಕುಟುಂಬಸ್ಥರ ಜೊತೆಗೆ ಗೋಕರ್ಣದಲ್ಲಿ ವಾಸವಾಗಿದ್ದ. ಬಳಿಕ ಮಗನ ಪ್ರೀತಿಯನ್ನು ಮೆಚ್ಚಿದ ಶೇಖರಯ್ಯ ಮದುವೆಗೆ ಒಪ್ಪಿಗೆ ನೀಡಿ ಅದ್ದೂರಿ ಕಾರ್ಯಕ್ರಮ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು.. ಆಕಾಶ್ ಮತ್ತು ಅನ್ನಪೂರ್ಣಗೆ ಮುದ್ದಾ ಹೆಣ್ಣುಮಗು ಇದೆ.. ಆಕಾಶ್ ಹುಬ್ಬಳ್ಳಿಯನ್ನು ಬಿಟ್ಟು ಗೋಕರ್ಣದಲ್ಲಿ ಹೆಂಡತಿಯ ಜೊತೆಗೆ ಸಹ ಜೀವನ ನಡೆಸುತ್ತಿದ್ದ.. ಆದರೆ ಇತ್ತೀಚಿನ ವಾಪಸು ಒಬ್ಬನೇ ಹುಬ್ಬಳ್ಳಿಯ ತಂದೆ ಮನೆಗೆ ಬಂದಿದ್ದ ಆಕಾಶ್ ಹೆಂಡತಿ ಮತ್ತು ಕುಟುಂಬಸ್ಥರಿಂದ ಫುಲ್ ಟಾರ್ಚರ್ ಇದೆ ಅಂತ ತನ್ನ ತಂದೆಯ ಬಳಿ ನೋವು ತೋಡಿಕೊಂಡಿದ್ದ..ಹೆಂಡತಿ ತಂದೆ ತಾಯಿ ವಿಪರೀತ ಸಾಲ ಮಾಡಿದ್ದು, ಇದಕ್ಕಾಗಿ ಹಣ ನೀಡುವಂತೆ ಆಕಾಶ್ ನನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ..

ಪತ್ನಿ ಅನ್ನಪೂರ್ಣ ಮತ್ತು ಆಕೆಯ ಕುಟುಂಬಸ್ಥರ ಮಾನಸಿಕ ಕಿರುಕುಳಕ್ಕೆ ಆಕಾಶ್ ವಿವಿಧ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ.. ಮಗನ ಪರಿಸ್ಥಿತಿ ನೋಡಲಾಗಾದೆ ತಂದೆ ಶೇಖರಯ್ಯ ಬುದ್ಧಿವಾದ ಹೇಳಿ ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಮನೆಯಲ್ಲಿಟ್ಟಿಕೊಂಡಿದ್ದರು..ಇತ್ತಿಚೆಗೆ ಎಲ್ಲಾ ದುರಭ್ಯಾಸ ಬಿಟ್ಟು ಚೆನ್ನಾಗಿದ್ದ.. ಆದರೆ ಇಂದು ಏಕಾಏಕಿ ಸ್ನೇಹಿತರ ಜೊತೆಗೆ ಹೊರಗೆ ತೆರಳಿದ್ದ ಆಕಾಶ್ ಸಾವನ್ನಪ್ಪಿದ್ದಾನೆ.‌ ಆಕಾಶ್ ನನ್ನು ಆತನ ಹೆಂಡತಿ ತಮ್ಮ ಕೊಲೆ ಮಾಡಿದ್ದಾನೆ ಅಂತ ಅಂತ ತಂದೆ ಶೇಖರಯ್ಯ ಆರೋಪಿಸಿದ್ದಾರೆ.. ಹೆಂಡತಿ ತಮ್ಮ ಆತ ಸ್ನೇಹಿತರ ಜೊತೆಗೆ ಆಕಾಶ್ ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬ ಮಧ್ಯ ಕುಡಿಸಿ, ಬಳಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನುವುದು ಕುಟುಂಬಸ್ಥರ ಆರೋಪ..

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಖಾಕಿಪಡೆ ಫುಲ್ ಅಲರ್ಟ್ ಆಗಿದೆ.. ಕ್ರೈಮ್ ಡಿಸಿಪಿ ರವೀಶ್ ನೇತೃತ್ವದ ತಂಡ ಆಕಾಶ್ ಮೃತಪಟ್ಟ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ರೆ, ಕಾನೂನು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಕಿಮ್ಸ್ ಆಸ್ಪತ್ರೆಗೆ ತೆರಳಿ ಆಕಾಶ್ ಕುಟುಂಬಸ್ಥರಿಂದ ಮಾಹಿತಿ ಪಡೆದು, ಸ್ನೇಹಿತರ ವಿಚಾರಣೆ ನಡೆಸಿದೆ..ಆಕಾಶ್ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ.. ಇದೇ ವೇಳೆ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಭೇಟಿ ನೀಡಿ ತನಿಖೆ ಮಾಹಿತಿಪಡೆದರು.. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗಾಯ ಆಗಿರೋದು ತಿಳಿದು ಬಂದಿದೆ. ಆದ್ರೆ ಮೃತ ಆಕಾಶ್ ತಂದೆ ಕೊಲೆ ಅನುಮಾನ ವ್ಯಕ್ತಪಡಿಸಿದ್ದಾರೆ.ಆಕಾಶ್ ತಲೆ ಬಿಟ್ಟು ಬೇರೆ ಕಡೆ ಗಾಯ ಇಲ್ಲ ತಂದೆ ಶೇಖರಯ್ಯ ಮಠಪತಿ ಅವನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ
ಆರು ಜನ ಸ್ನೇಹಿತರ ಮೇಲೆ ಆರೋಪ ಮಾಡಿದ್ದಾರೆ ನಾವು ಅವರು ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ ಅವರ ತಂದೆ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಅವರನ್ನು ಕರೆದು ವಿಚಾರಣೆ ಮಾಡ್ತಿದ್ದೇವೆ ಎಂದಿದ್ದಾರೆ..

ಒಟ್ಟಿನಲ್ಲಿ ಮನ ಮೆಚ್ಚಿದ ಹುಡುಗಿಯ ಜೊತೆಗೆ ಬಾಳಿ ಬದುಕ ಬೇಕಿದ್ದ ಆಕಾಶ್ ಅನುಮಾನವಾಗಿ ಸಾವನ್ನಪ್ಪಿದ್ದಾನೆ.‌ ಆಕಾಶ್ ಸಾವಿನ ಮರ್ಮವನ್ನು ಖಾಕಿಪಡೆ ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಸಬೇಕಿದೆ..

Tags:

error: Content is protected !!