National

ಲೋಕಸಭೆಯಲ್ಲಿ ವಿ ಪಕ್ಷಗಳಿಗೆ ಮಾತನಾಡಲು ಅವಕಾಶ ಕಲ್ಪಿಸಿ – ರಾಹುಲ್ ಗಾಂಧಿ

Share

18ನೇ ಲೋಕಸಭೆಗೆ ಸ್ಪೀಕರ್ ಆಗಿ ಆಯ್ಕೆಯಾದ ಓಂ ಪ್ರಕಾಶ್ ಬಿರ್ಲಾ ಅವರಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದರು

18ನೇ ಲೋಕಸಭಾ ಅಧಿವೇಶನಲ್ಲಿ ಮಾತನಾಡಿದ ರಾಹುಲ್ ಗಾಂಧಿ ನಿಮ್ಮ ಆಯ್ಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎರಡ ನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾದ ನಿಮ್ಮನ್ನು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪರವಾಗಿ ಅಭಿನಂದನೆ ತಿಳಿಸುತ್ತೇನೆ,

ಸ್ಪೀಕರ್ ಸರ್ ಲೋಕಸಭೆಯು ಇಡೀ ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತದೆ. ಅವರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಅಧಿಕಾರವಿದೆ. ಆದರೆ ವಿರೋಧ ಪಕ್ಷ ಕೂಡ ಭಾರತದ ಶ್ರೀಸಾಮಾನ್ಯನ ಧ್ವನಿಯಾಗಿದೆ. ಆ ಭಾರಿಯಂತೂ ಈ ಧ್ವನಿ ಇನ್ನು ಹೆಚ್ಚು ಸದ್ದು ಮಾಡಲಿದೆ ಎಂದು ಸದನಕ್ಕೆ ತಿಳಿಸಿದರು.

ಸ್ಪೀಕರ್ ಆಗಿ ನಿಮ್ಮ ಕಾರ್ಯ ನಿರ್ವಹಣೆಗೆ ವಿರೋಧ ಪಕ್ಷ ಸಹಕಾರ ನೀಡುತ್ತದೆ. ಸದನವು ಜನಹಿತದಲ್ಲಿ ನಡೆಯಬೇಕು. ಇದು ಪ್ರಜೆಗಳಿಗೆ ಉಪಯೋಗವಾಗುವಂತಾಗಬೇಕು. ಇಲ್ಲಿ ಭರವಸೆಯ ಧ್ವನಿ ಕೇಳುವಂತಾಗಬೇಕು. ಆ ಧ್ವನಿಗೆ ಇಲ್ಲಿ ಕೇಳುವಂತಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

Tags:

error: Content is protected !!