animals

40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Share

ಪ್ರತಿನಿಧಿ/ಚಿಕ್ಕೋಡಿ: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಚಿಕ್ಕೋಡಿ ನಗರದ ವಾಡಾ ಗಲ್ಲಿಯಲ್ಲಿ ನಡೆದಿದೆ.

 

ಶ್ರೀನಿವಾಸ್ ದೊಡ್ಡಮನಿ ಅವರ ಸುಮಾರು 40 ಅಡಿ ಆಳದ ಬಾವಿಯಿದ್ದು, ಇಂದು ಬೆಳಗ್ಗೆ ಬೆಕ್ಕು ಕಾಲು ಜಾರಿ ಬಿದ್ದಿದೆ. ಹೀಗಾಗಿ ದೊಡ್ಡಮನಿ ಮನೆಯವರು ಚಿಕ್ಕೋಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.ಅದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಇಳಿದು ಬೆಕ್ಕನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹೀಗಾಗಿ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಅಗ್ನಿಶಾಮಕ ದಳದವರ ಪ್ರಯತ್ನದಿಂದ ರಕ್ಷಿಸಲಾಗಿದೆ.ಅಗ್ನಿಶಾಮಕ ದಳದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

ಈ ಸಂದರ್ಭದಲ್ಲಿ ದೊಡ್ಡಮನಿ ಕುಟುಂಬ ಹಾಗೂ ಚಿಕ್ಕೋಡಿ ಅಗ್ನಿಶಾಮಕ ಠಾಣಾಧಿಕಾರಿ ಅನುರಾಗ್ ಬಿ.ಎಲ್., ಅಗ್ನಿಶಾಮಕ ಪ್ರಮುಖರಾದ ರಾಚಯ್ಯ ಮಠಪತಿ, ಎಸ್.ಎನ್.ನಾಗನೂರಿ, ರಾಜೇಂದ್ರ ಪಾಟೀಲ, ಬಸು ಹಿರೇಗೌಡರ್, ಹೈದರ್ ಅಲಿ ಮುಲ್ತಾನಿ, ಮಂಜು ಸನದಿ ಉಪಸ್ಥಿತರಿದ್ದರು.

Tags:

#catfallinwell #catrescue #firebrigaderescue chikkodi inbelgaum innews
error: Content is protected !!