award

ರಾಜ್ಯಮಟ್ಟದ ಈಜು ಡೈವಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ತಂಡಕ್ಕೆ 3 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕ

Share

ರಾಜ್ಯಮಟ್ಟದ ಈಜು ಡೈವಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ತಂಡ 3 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದುಕೊಂಡಿದೆ.

ಕರ್ನಾಟಕ ಈಜು ಸಂಸ್ಥೆಯು ಬೆಂಗಳೂರಿನ ಹಲಸೂರು ಕೆನ್ಸಿಂಗ್ಟನ್ ಪೂಲ್‌ನಲ್ಲಿ ರಾಜ್ಯಮಟ್ಟದ ಈಜು ಡೈವಿಂಗ್ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಬೆಳಗಾವಿ ಅಬ್ಬಾ ಹಿಂದ್ ಸ್ಪೋರ್ಟ್ಸ್ ಕ್ಲಬ್ ಡೈವರ್ಸ್ ಅತ್ಯುತ್ತಮ ಪ್ರದರ್ಶನ ನೀಡಿ 3 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದರು. 2024 ರ ಜುಲೈ 6 ರಿಂದ 9 ರವರೆಗೆ ಇಂದೋರ್ ಮಧ್ಯಪ್ರದೇಶದಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ತಂಡದಲ್ಲಿ ಶ್ರೀ ಯುವರಾಜ್ ಮೋಹನ್ಗೇಕರ್ 2 ಚಿನ್ನ, ಮಯೂರೇಶ್ ಜಾಧವ್ 1 ಚಿನ್ನ 1 ಬೆಳ್ಳಿ ಮತ್ತು ಶ್ರೀ ಅರ್ನವ್ ಕುಲಕರ್ಣಿ 1 ಬೆಳ್ಳಿ, 1 ಕಂಚು ಆಯ್ಕೆಯಾಗಿದ್ದಾರೆ.ಸ್ಪರ್ಧಾಳುಗಳಿಗೆ NIS ಈಜು ತರಬೇತುದಾರ ವಿಶ್ವಾಸ್ ಪವಾರ್ ಮಾರ್ಗದರ್ಶನ ದೊರೆಯುತ್ತಿದ್ದಾರೆ. ಶಾಸಕ ದಕ್ಷಿಣ ಅಭಯ ಪಾಟೀಲ, ಶಿವರಾಜ್ ಮೋಹಿತೆ,ಮೋಹನ ಸಪ್ರೆ, ಶೀತಲ್ ಹುಲಬತ್ತೆ ಮತ್ತು ಅರವಿಂದ ಸಂಗೋಳಿ ಪ್ರೋತ್ಸಾಹಿಸಿದ್ದಾರೆ.

Tags:

error: Content is protected !!