Bidar

ಬಸ್ ಸೀಟ್ ಗಾಗಿ “ಶಕ್ತಿ” ಪ್ರದರ್ಶನ – ಚಪ್ಪಲಿ ಏಟು ನಂಗೂ ಫ್ರೀ , ನಿಂಗೂ ಫ್ರೀ!

Share

ಬೀದರ್ ನಲ್ಲಿ ಬಸ್ ಸೀಟ್ ಗಾಗಿ ಮಹಿಳೆಯರ ಶಕ್ತಿ ಪ್ರದರ್ಶನ ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ ಮಹಿಳೆಯ ಕಿತ್ತಾಟದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾರ್ವಜನಿಕರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ನಿಂದ ಕಲಬುರಗಿ ಬಸ್ ನಲ್ಲಿ ಇಬ್ಬರು ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ.

ನಂತರ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಇಬ್ಬರು ಚಪ್ಪಲಿಯಲ್ಲಿ ಹೊದೆದಾಡಿಕೊಂಡಿದ್ದಾರೆ. ಇಷ್ಟಕ್ಕೆ ನಿಲ್ಲದ ಇವರ ಗಲಾಟೆ ಕೊನೆಗೆ ಬಟ್ಟೆಯನ್ನು ಎಳೆದಾಡಿಕೊಂಡಿದ್ದಾರೆ. ಮಹಿಳೆಯರ ಈ ಹುಚ್ಚಾಟವನ್ನು ನಿಲ್ಲಿಸಲು ಪ್ರಯಾಣಿಕರೆಲ್ಲರೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.

ಅಂತಿಮವಾಗಿ ಮಹಿಳೆಯರು ಸುಮ್ಮನಾಗಿದ್ದಾರೆ. ಸದ್ಯ ಮಹಿಳೆಯ ಕಿತ್ತಾಟದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಶಕ್ತಿ ಯೋಜನೆಯೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!