ಕಲಬುರಗಿ : ಕೈ ನಾಯಕರು ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಜಂಬ ಕೊಚ್ಚಿಕೊಳ್ತಾರೆ. ಇದರಿಂದ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಆದರೂ ಕೂಡ ಸಿಎಂ ನಮ್ಮ ಸರ್ಕಾರ ದಿವಾಳಿಯಾಗಿಯೇ ಇಲ್ಲ ಎನ್ನುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆದಿದ್ದಾರೆ.
ಕಲಬುರಗಿ ನಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಗೆ ಐದು ವರ್ಷ ಅಧಿಕಾರ ನಡೆಸುವ ಜವಾಬ್ದಾರಿ ಕೊಟ್ಟಿದ್ದಾರೆ. ಜನರಿಗೆ ನೀಡಿರುವ ಬದ್ಧತೆಯನ್ನು ಪೂರೈಸಲಿ, ಅದು ಬಿಟ್ಟು ಎಲ್ಲದಕ್ಕೂ ಕೇದ್ರ ಸರ್ಕಾರವನ್ನೇ ಕಾಂಗ್ರೆಸ್ ನಾಯಕರು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಇವರೇನು ಮಜಾ ಮಾಡೋಕೆ ಇಲ್ಲಿ ಕೂತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಸರ್ಕಾರ ಐದು ವರ್ಷ ಪೂರೈಸಲಿ ಎಂದು ನಾನು ಹಾರೈಸುತ್ತೇನೆ. ಆದರೆ ಅವರಲ್ಲಿ ಆಂತರಿಕ ಕಲಹ ಹೆಚ್ಚಾಗುತ್ತಿದೆ. ಆದ್ದರಿಂದ ಮುಂದೆ ಏನಾಗುತ್ತದೆ ಅಂತ ನೋಡೋಣ ಎಂದು ಜೋಶಿ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಹೇಳಿ ಮರ್ಡರ್ ಮಾಡಲಾಗುತ್ತಿದೆ, ಪೊಲೀಸ್ ಟ್ರಾನ್ಸಪರ್ ನಲ್ಲಿ ಶಾಸಕರು ಕೋಟ್ಯಾಂತರ ದುಡ್ಡು ಹೊಡೆದಿದ್ದಾರೆ. ಮೊದ್ಲು ರಸ್ತೆ, ಕಟ್ಟಡದಲ್ಲಿ ಕಮಿಷನ್ ತಗೊಳ್ತಿದ್ರು. ಆದ್ರೆ ಈಗ ರಸ್ತೆ ಕಟ್ಟಡ, ಯಾವುದೇ ಅಭಿವೃದ್ಧಿ ಆಗ್ತಿಲ್ಲ. ಹೀಗಾಗಿ ಕಮಿಷನ್ ಹೊಡೆಯಲಿಕ್ಕೆ ಯಾವುದೇ ದಾರಿ ಇಲ್ಲದೇ ಪೊಲೀಸ್ ವರ್ಗಾವಣೆಯಲ್ಲಿ ದುಡ್ಡು ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.