ಖಾನಾಪುರದ ನಿಟ್ಟೂರು ಮತಗಟ್ಟೆ 125 ರ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಮತಗಟ್ಟೆ ಬಳಿ ಬಿಜೆಪಿ ಶಾಲು,ಚಿಹ್ನೆ ಮತ್ತು ಟೋಪಿಗಳನ್ನು ಹಾಕಿ ಪ್ರಚಾರ ಮಾಡುತಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ ಎಂದು ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು. ಮತಗಟ್ಟೆ ಬಳಿ ಪ್ರಚಾರಕ್ಕೆ ಅವಕಾಶ ಮಾಡಿಕೊಡದಂತೆ ಚುನಾವಣಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
