ಹುಬ್ಬಳ್ಳಿ : ರಾಮ ಮಂದಿರ ಕಟ್ಟಿರುವ ಸರಿಯಾದ ಜಾಗ ಇಲ್ಲ..ರಾಮ ಮಂದಿರ ಕಟ್ಟಿರುವದಕ್ಕೆ ಬಡತನ ನಿರ್ಮೂಲಣೆ ಆಗಲ್ಲ. ರಾಮ ಮಂದಿರ ಕಟ್ಟಿರೋದು ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್ ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋದ ಇಲ್ಲ. ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದಾರೆ. ರಾಮ ಮಂದಿರದಿಂದ ನಿಮ್ಮ ನಿರ್ಮೂಲನೆ ಆಗಿದೆಯಾ? ಅದನ್ನ ಹೇಳಿ ಯಾಕೆ ವೋಟ್ ಕೇಳತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಅವರಿಗೆ ಪ್ರಚಾರದ ಅವಶ್ಯಕತೆ ಇಲ್ಲ. ಆದರೆ, ಕೆಲಸ ಮಾಡದೆ ಬರೀ ಪ್ರಚಾರದಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಚರ್ಚೆಯಾಗಬೇಕು. ಚರ್ಚೆ ಮಾಡಲು ಕೇಂದ್ರ ಸಿದ್ಧವಿಲ್ಲ ಎಂದು ದೂರಿದರು.
2 ಲಕ್ಷ ಕೋಟಿ 10 ಲಕ್ಷ ಕೋಟಿ ಸ್ಕ್ಯಾಮ್ ಅಂತಾರೆ, 2G ಹಗರಣದಲ್ಲಿ 10 ಲಕ್ಷ ಕೋಟಿ ಅಂತಾರೆ, ಟೆಂಡರ್ ಕರೆದ್ರೆ 10 ಸಾವಿರ ಕೋಟಿ ಆಗಲ್ಲ, ಲಕ್ಷ ಕೋಟಿ ಅಂತಾರೆ. ಯಾರಿಗೂ ಮಾತನಾಡಲು ಬಿಡುವುದಿಲ್ಲ. ಕೇಂದ್ರ ಸರ್ಕಾರ 10 ವರ್ಷಗಳ ಆಡಳಿತ ಮಾಡಿದೆ. ಅವರು ಏನೆಲ್ಲಾ ಮಾಡಿದ್ರು ಗೊತ್ತಿಲ್ವಾ? ಅವರು ಮಾಡಿರುವ ವೈಫಲ್ಯತೆಗಳು ಯಾರು ಕಣ್ಣಿಗೂ ಕಾಣಲ್ಲವೆಂದು ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.