Delhi

ಸುಳ್ಳು ಹೇಳಿದ್ದಕ್ಕೆ ಕ್ಷಮಿಸಿ : ನಾನು ಸತ್ತಿಲ್ಲ ಎಂದ ಹಾಟ್ ಮಾಡೆಲ್ ಪೂನಂ

Share

ನವದೆಹಲಿ: ತಮ್ಮ ಹಠಾತ್‌ ಸಾವಿನ ಸುದ್ದಿ ಬಳಿಕ ಇಡೀ ಬಾಲಿವುಡ್‌ ಮಾತ್ರವಲ್ಲದೇ ಅಭಿಮಾನಿಗಳಿಗೆ ಶಾಕ್‌ ನೀಡಿದ್ದ ಪೂನಂ ಪಾಂಡೆ ಇದೀಗ ಲೈವ್‌ ವೀಡಿಯೋ ಹಂಚಿಕೊಂಡು ತಮ್ಮ ಸಾವಿನ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಆರೋಗ್ಯವಾಗಿದ್ದೇನೆ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 2 ರಂದು ಮಾಡೆಲ್, ನಟಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಸುದ್ದಿಯ ಬಗ್ಗೆ ಎಲ್ಲೆಡೆ ಅನುಮಾನಗಳೂ ಮೂಡಿದ್ದು, ಇಂದು ಪೂನಂ ಆರೋಗ್ಯವಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

Tags:

error: Content is protected !!