Chikkamagalur

ಚಿಕ್ಕಮಗಳೂರು ಪೊಲೀಸ್​ ಠಾಣೆ ಎದುರು ಮಾಜಿ ಸಚಿವ ಸಿ.ಟಿ ರವಿ ಪ್ರತಿಭಟನೆ

Share

ಚಿಕ್ಕಮಗಳೂರು : ನಾನೂ ಕರಸೇವಕ ನನ್ನನ್ನು ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ ರವಿ ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಸಿ ಟಿ ರವಿ ಮೌನ ಪ್ರತಿಭಟನೆ ನಡೆಸಿದ್ದು, ಶ್ರೀ ರಾಮ್ ಜೈ ರಾಮ್ ಎನ್ನುತ್ತ ಠಾಣೆ ಮುಂದೆ ಧರಣಿಗೆ ಕುಳಿತಿದ್ದರು.

ಬಿಜೆಪಿಯ ಹಲವು ಕಾರ್ಯಕರ್ತರೂ ಠಾಣೆಯ ಮುಂದೆ ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಪೊಲೀಸ್ ಠಾಣೆ ಒಳಗೆ ರವಿಯವರನ್ನು ಕರೆದೊಯ್ದರು. ಈ ವೇಳೆ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ನಾವೂ ಕರಸೇವಕರೇ, ನಮ್ಮನ್ನೂ ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.

Tags:

Chikkamagaluru police station CT Ravi
error: Content is protected !!