Vijaypura

ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ: 5 ಕ್ಕೂ ಹೆಚ್ಚು ಅಕ್ರಮ ಅಂಗಡಿಗಳ ತೆರವು

Share

ಐತಿಹಾಸಿಕ ನಗರಿ ವಿಜಯಪುರ ನಗರದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಅಕ್ರಮ ಅಂಗಡಿಗಳನ್ನು ತೆರವು ಮಾಡಲಾಗಿದೆ. ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ವಿಜಯಪುರ ನಗರದ ವಾಜಪೇಯಿ ಸರ್ಕಲ್ ಎದುರು ನಡೆಯಿತು.

ರಸ್ತೆ ಅಭಿವೃದ್ಧಿ ಹಿನ್ನೆಲೆ ಅಂಗಡಿಗಳನ್ನು ತೆರವು ಮಾಡಲಾಯಿತು. ಇನ್ನೂ ಮಹಾನಗರ ಪಾಲಿಕೆ ಆಯುಕ್ತ ಸೌದಾಗರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಈ ವೇಳೆ ಅಹಿತಕರ ಘಟನೆಗಳು ಆಗದಂತೆ ಗಾಂಧಿಚೌಕ್ ಪೊಲೀಸ ಠಾಣಾ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 5 ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಯಿತು.

Tags:

error: Content is protected !!