ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹತ್ತಿ ಇಳಿಯುವ ಸಂದರ್ಭ ವ್ಯಕ್ತಿಯೊರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.9ರ ಶನಿವಾರ ಸಂಜೆ ನಡೆದಿದೆ.
ಕೊಟ್ರೇಶ ಕಲಘಟಗಿ(40) ಮೃತಪಟ್ಟ ವ್ಯಕ್ತಿಯಾಗಿದ್ದು ತಮ್ಮ ಕುಟುಂಬ ಸಮೇತ ಕಲಘಟಗಿಯಿಂದ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ್ದರು.
ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಹೃದಯ ಬೇನೆ ಕಾಣಿಸಿಕೊಂಡಿದ್ದು, ಆನೆಗೊಂದಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಂಜನಾದ್ರಿ ಗೆ ಆಗಮಿಸುವವರು ಬೆಟ್ಟ ಹತ್ತುವ ಇಳಿಯುವ ಸಂದರ್ಭದಲ್ಲಿ ಈಗಾಗಲೇ ಅನೇಕರು ಸೂಕ್ತ ಸಮಯದಲ್ಲಿ ಕೂಡಲೇ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ ಪ್ರಕರಣಗಳು ಜರುಗಿದ್ದು, ಅಂಜನಾದ್ರಿ ಬಳಿ ಆಸ್ಪತ್ರೆ ಆರಂಭಿಸುವಂತೆ ಒತ್ತಾಯವಿದ್ದರೂ ಸರಕಾರದ ನಿರ್ಲಕ್ಷ್ಯದ ಪರಿಣಾಮ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.
