hubbali

ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ : ಸಿಎಂ ಬೊಮ್ಮಾಯಿ

Share

ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ನಿಂದ ಬಂದಿದ್ದರು. ಮರಳಿ ಅಲ್ಲಿಗೇ ಹೋಗ್ತಿದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಗುರುಮಠಕಲ್ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಮಾರ್ಚ್ 24 ಕ್ಕೆ ರಾಜ್ಯಕ್ಕೆ ಅಮಿತ್ ಶಾ ಬರ್ತಾರೆ. ಮಾರ್ಚ್ 25 ಕ್ಕೆ ಪ್ರಧಾನಿ ಮೋದಿ ಬರ್ತಾರೆ.
ಮಾರ್ಚ್ 26 ಕ್ಕೆ ಮತ್ತೆ ಅಮಿತ್ ಶಾ ಪ್ರವಾಸ ಮಾಡ್ತಾರೆ ಎಂದರು.

ರಾಹುಲ್ ಗಾಂಧಿ ರಾಜ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಕಳೆದ ಬಾರಿ ಬಂದದ್ದಕ್ಕೂ ಈ ಬಾರಿ ಬಂದದ್ದಕ್ಕೂ ಬಹಳ ವ್ಯತ್ಯಾಸವಿದೆ. ಈ ಬಾರಿ ಅವರು ಬ್ರಿಟನ್ ವಿವಿ ಯಲ್ಲಿ ಮಾತನಾಡಿದರು. ದೇಶ, ಪ್ರಜಾಪ್ರಭುತ್ವ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶವ್ಯಾಪ್ತಿ ಇದರ ಬಗ್ಗೆ ಖಂಡನೆಯಾಗಿದೆ. ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ ಎಂದರು.

ಸಿದ್ಧರಾಮಯ್ಯ ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಆಶ್ವಾಸನೆಗಳನ್ನು ಕಾಂಗ್ರೆಸ್ ಈಡೇರಿಸಿಲ್ಲ. ರಾಜಾಸ್ಥಾನ, ಛತ್ತೀಸ್ ಘಡ ಮತ್ತಿತರ ಕಡೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಜನರನ್ನು ಯಾಮಾರಿಸೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಜಿಟಿಂಗ್ ಕಾರ್ಡ್. ಸಿದ್ಧರಮಯ್ಯ ವಿರುದ್ಧ ಸಾಕಷ್ಟು ಚಾರ್ಜ್‌ ಗಳಿವೆ. ಲೋಕಾಯುಕ್ತದಲ್ಲಿಯೂ ದೂರಿದೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ ಅಂದ್ರೆ ಇದ್ಲಿ, ಮಸಿಗೆ ಬುದ್ಧಿ ಹೇಳಿದಂತೆ. ಭಾರತದಲ್ಲಿ ಕಾಂಗ್ರೆಸ್ ಪತನ ಶುರುವಾಗಿದೆ ಎಂದರು.

ರೀಡೋ ವಾಚ್ ಬಗ್ಗೆ ನ್ಯಾಯಾಂಗ ತನಿಖೆ ಮಾಡ್ತಿದ್ದೇವೆ. ವಿಪಕ್ಷಗಳ 59 ಪ್ರಕರಣಗಳ ಪೈಕಿ ಕೆಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ಕೆಲವನ್ನು ಮುಂದಿನ ದಿನಗಳಲ್ಲಿ ಕೊಡ್ತೇವೆ. ಬಿಜೆಪಿ ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡ್ತಿದೆ ಎಂಬ ಆರೋಪ.
ಇತಿಹಾಸವನ್ನು ಮರೆಮಾಚುವ ಕೆಲಸ ನಡೆದಿದೆ. ಉರಿಗೌಡ ಅಂತ ಹೇಳಲ್ಲ . ಹಲವಾರು ಪ್ರಕರಣಗಳಲ್ಲಿ ಸತ್ಯ ಮರೆಮಾಚುವ ಕೆಲಸ ನಡೆದಿದೆ. ಅವುಗಳ ಸತ್ಯ ಹೇಳಿದರೆ ಇವರಿಗೆ ತಡೆದುಕೊಳ್ಳೋಕೆ ಆಗಲ್ಲ. ಸತ್ಯ ಶೋಧನೆ ಆದಾಗ ಎಲ್ಲವೂ ಹೊರಗೆ ಬರುತ್ತೆ, ಜಯ ಸಿಗುತ್ತೆ ಎಂದರು.

ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿ,ಅವರ ಬೇಡಿಕೆ ಈಡೇರಿಸಿದ್ದೇವೆ. ಪ್ರಮುಖ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ, ಬಗೆಹರಿಸಿದ್ದೇನೆ. ಅಭಿನಂದನೆ ಸಲ್ಲಿಸೊ ಜೊತೆಗೆ, ಮುಷ್ಕರ ವಾಪಸ್ ಪಡೆದಿದ್ದಾರೆ. ಪ್ರಮುಖ ಸಂಘಟನೆ ಜೊತೆ ಮಾತನಾಡಿದ್ದು, ಮುಷ್ಕರಕ್ಕೆ ಹೋಗೋ ಪ್ರಶ್ನೆಯೇ ಇಲ್ಲ ಎಂದರು

Tags:

error: Content is protected !!