Belagavi

ಶಿವಜಯಂತಿ ವೇಳೆ ಬೆಳಗಾವಿಗರ ಗಮನಸೆಳೆದ ಆರಂಭ್‍ ಡೋಲ್‍ತಾಶಾ ಪಥಕದ ಪ್ರಸ್ತುತ್ತಿ

Share

ಬೆಳಗಾವಿಯಲ್ಲಿ ಶಿವ ಜಯಂತಿಉತ್ಸವದ ಸಂಭ್ರಮ ಮನೆ ಮಾಡಿತ್ತು.ನಿನ್ನೆರಾತ್ರಿ ನಡೆದಆರಂಭ್‍ಡೋಲ್‍ತಾಶಾ ಪಥಕದ ಪ್ರಸ್ತುತಿ ಸಂಪೂರ್ಣ ಬೆಳಗಾವಿಯ ಗಮನವನ್ನತನ್ನೆಡೆ ಸೆಳೆದಿದ್ದು.

ಹೌದು, ಬೆಳಗಾವಿ ನಗರದಲ್ಲಿಛತ್ರಪತಿ ಶಿವಾಜಿ ಮಹಾರಾಜರಜಯಂತಿಯನ್ನಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತಿದೆ. ಅಕ್ಷಯತೃತೀಯ ವೇಳೆ ರೂಪಕವಾಹನಗಳ ಮೆರವಣಿಗೆ ನಡೆಯುತ್ತದೆ.ಅದೇರೀತಿ ಫೆಬ್ರವರಿ 19 ನಡೆಯುವಜಯಂತ್ಯೋತ್ಸವವುಕೂಡ ಸಡಗರ – ಸಂಭ್ರಮದಿಂದಕೂಡಿರುತ್ತದೆ.ಎಸ್‍ಪಿಎಂರಸ್ತೆಯಲ್ಲಿರುವಛತ್ರಪತಿ ಶಿವಾಜಿ ಉದ್ಯಾನದಲ್ಲಿ ಬೆಳಿಗ್ಗೆಯಿಂದ ಶಿವರಾಯರ ಮೂರ್ತಿಗೆ ಮಾಲಾರ್ಪಣೆ ಮಾಡಿಗೌರವ ಸಲ್ಲಿಸಲಾಯಿತು.

ಸಂಜೆಯ ವೇಳೆ ಛತ್ರಪತಿ ಶಿವಾಜಿ ಉದ್ಯಾನದ ಹಿಂಭಾಗದಲ್ಲಿಆರಂಭಡೋಲ್‍ತಾಶಾ ಪಥಕದ ಪ್ರಸ್ತುತಿ ಸಂಪೂರ್ಣ ಬೆಳಗಾವಿಯ ಗಮನ ತನ್ನತ್ತ ಸೆಳೆಯುತ್ತಿತ್ತು.ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ, ಶಿವಕಾಲೀನ ಇತಿಹಾಸವನ್ನತಿಳಿಸುವ, ಧೈರ್ಯ-ಶೌರ್ಯಗಳ ಆಟಗಳು, ಡೋಲ್‍ತಾಶಾ ಪಥಕದ ಪ್ರಸ್ತುತಿಎಲ್ಲರನ್ನ ಹುಬ್ಬೇರಿಸುವಂತೆ ಮಾಡುತ್ತಿತ್ತು. ಇದರಒಂದುಝಲಕ್ ಇಗೋ ನಿಮ್ಮ ಮುಂದೆ.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಶಿವಪ್ರೇಮಿಗಳು ಭಾಗಿಯಾಗಿ ಈ ಕ್ಷಣದ ಮನೋರಂಜನೆಯನ್ನಕಣ್ತುಂಬಿಕೊಂಡರು. ಈ ವೇಳೆ ಜೈ ಭವಾನಿ- ಜೈಶಿವಾಜೀಯ ಜಯಘೋಷ ಪ್ರತಿಧ್ವನಿಸುತ್ತಿತ್ತು.

 

Tags:

error: Content is protected !!