ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯ ರಾಜ್ಯದ ಬಹುದೊಡ್ಡ ಸಮಾಜವಾಗಿದ್ದು ಅಭಿವೃದ್ಧಿಯ ಉದ್ದೇಶದಿಂದ 7.5 ಹೆಚ್ಚಿಗೆ ಮೀಸಲಾತಿಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ವಾಲ್ಮೀಕಿ ಮಹಾಸಭಾ ಉಪಾಧ್ಯಕ್ಷರಾದ ರಾಜಶೇಖರ್ ತಳವಾರ್ ಹೇಳಿದರು.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ರಜಶೇಖರ್ ತಳವಾರ್ರವರು, ರಾಜ್ಯದ ವಾಲ್ಮೀಕಿ ನಾಯಕ ಸಮುದಾಯ ಅತೀದೊಡ್ಡ ಸಮುದಾಯವಾಗಿದೆ. ಇದು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ವತೋಮುಖ ಅಭಿವೃದ್ಧಿüಗಾಗಿ ಮೀಸಲಾತಿ ಒಂದು ಸಂಜೀವಿನಿಯಿದ್ದಂತೆ. ಹಾಗಾಗಿ ಈ ಹಿಂದೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರಾಜನಹಳ್ಳಿಯಿಂದ ರಾಜಧಾನಿಯ ವರೆಗೆ ವಾಲ್ಮೀಕಿ ಸಮುದಾಯ ಗುರು ಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಪಾದಯಾತ್ರೆ ಹಾಗೂ ವಾಲ್ಮೀಕಿ ಸಮುದಾಯದ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿಯಾಗಿದದ ಕುಮಾರಸ್ವಾಮಿರವರು ನ್ಯಾಯಮೂರ್ತಿ ನಾಗಮೋಹನದಸ್ ಏಕಸದಸ್ಯದ ಪೀಠವನ್ನು ರಚನೆ ಮಾಡಿದ್ದರು.
ಇನ್ನು ಅದು ವರದಿ ನೀಡುವ ಮೊದಲೇ ಸರಕಾರ ಬಿದ್ದು ಹೋಯಿತು. ಇನ್ನು ಯಡಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಉಪ ಸಮೀತಿಯನ್ನು ರಚನೆ ಮಾಡಲಾಯಿತು. ಆದರೆ ಹೀಗೆ ಸಮಿತಿಗಳು ರಚನೆಯಾದವೇ ಹೊರತು ನಮಗೆ ಮೀಸಲಾತಿ ಸಿಗಲಿಲ್ಲ ಎಂದರು.
ಇನ್ನು ಸಮಾಜಕ್ಕೆ ಮೀಸಲಾತಿಯನ್ನು ಕೊಡಿಸುವ ಉದ್ದೇಶದಿಂದ ಪ್ರಸನ್ನಾನಂದಪುರಿ ಸ್ವಾಮಿಜಿಗಳು ಬೆಂಗಳೂರು ನಗರದ ಫ್ರೀಡಂ ಪಾರ್ಕ್ನಲ್ಲಿ ಏಕಾಂಗಿಯಾಗಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಸಮಾಜದ ಎಲ್ಲರ ಬೆಂಬಲವಿದೆ. ಈ ಕೂಡಲೇ ಸರಕಾರ ಶೇ 7.5 ರಷ್ಟು ಹೆಚ್ಚುವರಿ ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸಮಾಜದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ವಾಲ್ಮೀಕಿ ಸಮುದಾಯಕ್ಕೆ ಇನ್ನೂ ಹೆಚ್ಚುವರಿಯಾಗಿ 7.5ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿ ಹೋರಾಟ ಮತ್ತೆ ಪ್ರಾರಂಭವಾಗಿದೆ. ಇನ್ನು ಈಗಾಗಲೇ ಪ್ರಸನ್ನಾನಂದಪುರ ಸ್ವಾಮಿಜಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಕುರಿತಂತೆ ಸರಕಾರ ನಿಲುವು ಏನೆಂದು ಆದು ನೋಡಬೇಕಿದೆ.
